ಹಾಸನ : ಖಾಸಗಿ ರೆಸಾರ್ಟ್‌ಗೆ ಸೆಸ್ಕ್ ಲೈನ್‌ಮ್ಯಾನ್‌ಗಳು ಅನಧಿಕೃತ ವಿದ್ಯುತ್ ಸಂಪರ್ಕ ನೀಡಿದ್ದಾರೆ ಎಂದು ಆರೋಪಿಸಿ ವಿದ್ಯುತ್ ಗುತ್ತಿಗೆದಾರರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಸಕಲೇಶಪುರ ತಾಲ್ಲೂಕಿನ, ಹಾಡ್ಯ ಗ್ರಾಮದಲ್ಲಿ ನಡೆದಿದೆ
ವಿದ್ಯುತ್ ಸಂಪರ್ಕ ನೀಡುತ್ತಿದ್ದ ಲೈನ್‌ಮ್ಯಾನ್‌ಗಳನ್ನು ತರಾಟೆಗೆ ತೆಗೆದುಕೊಂಡ ಗುತ್ತಿಗೆದಾರರು ಆನೆ ಸಮಸ್ಯೆ ಇರುವ ಕಡೆ ಹಾಕಬೇಕಾದ ವಿದ್ಯುತ್ ಕಂಬಗಳನ್ನು ಖಾಸಗಿ ರೆಸಾರ್ಟ್‌ಗೆ ವಿದ್ಯುತ್ ಸಂಪರ್ಕಕ್ಕೆ ಬಳಸಿದ್ದೀರಿ ಎಂದು ಆರೋಪಿಸಿದರು.
ಆಗ ಲೈನ್‌ಮ್ಯಾನ್ ಹಾಗೂ ಗುತ್ತಿಗೆದಾರರ ನಡುವೆ ವಾಗ್ವಾದ ನಡೆದು, ಗುತ್ತಿಗೆದಾರರು ಸ್ವಿಚ್ ಬೋರ್ಡ್ ಹಿಡಿದು ಸ್ಥಳದಲ್ಲೇ
ದಿಢೀರ್ ಪ್ರತಿಭಟನೆ ನಡೆಸಿದರು.
ಲೈನ್‌ಮ್ಯಾನ್‌ಗಳಿಂದ ಕಾನೂನು ಉಲ್ಲಂಘನೆಯಾಗಿದೆ. ರೆಸಾರ್ಟ್ ಮಾಲೀಕರಿಂದ ಹಣ ಪಡೆದು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ನೀಡಿರುವ ಸಾಮಾಗ್ರಿಗಳನ್ನು ಬಳಕೆ ಮಾಡಲಾಗಿದೆ ಎಂದು ದೂರಿದರು.
ಗುತ್ತಿಗೆದಾರರು ಪ್ರತಿಭಟನೆ ನಡೆಸುತ್ತಿದ್ದಂತೆ ಲೈನ್‌ಮ್ಯಾನ್ ಸ್ಥಳದಿಂದ ಕಾಲ್ಕಿತ್ತರು.
ಸೆಸ್ಕ್ ನಿಂದ ಸಂಬಳ ಪಡೆದು ಖಾಸಗಿ ರೆಸಾರ್ಟ್‌ಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿರುವ ಲೈನ್‌ಮ್ಯಾನ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಗುತ್ತಿಗೆದಾರರು ಆಗ್ರಹಿಸಿದರು.