ಹಾಸನ: ರೀಲ್ಸ್ ಮಾಡಲು ಬೆಟ್ಟದ ತುದಿಯಲ್ಲಿ ನಿಂತ ಯುವಕ ಆಯತಪ್ಪಿ ನೂರು ಅಡಿ ಆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಸಕಲೇಶಪುರ ತಾಲ್ಲೂಕಿನ ಗವಿಬೆಟ್ಟದಲ್ಲಿ ನಡೆದಿದೆ.
ಗಾಯಗೊಂಡ ಯುವಕನನ್ನು ರಾಶಿದ್ (18) ಎಂದು ಗುರುತಿಸಲಾಗಿದೆ. ಶನಿವಾರಸಂತೆಯಿಂದ ತನ್ನ ಇಬ್ಬರು ಸ್ನೇಹಿತರೊಂದಿಗೆ ಗವಿಬೆಟ್ಟಕ್ಕೆ ಬಂದಿದ್ದ ರಾಶಿದ್, ಬೆಟ್ಟದ ತುದಿಯಲ್ಲಿ ನಿಂತು ರೀಲ್ಸ್ ಮಾಡುತ್ತಿದ್ದ ವೇಳೆ ಜಾರಿ ಬಿದ್ದನು. ಇದರಿಂದ ಆತನ ತಲೆ ಹಾಗೂ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಸ್ಥಳೀಯರು ಮತ್ತು ಯಸಳೂರು ಠಾಣೆ ಪೊಲೀಸರ ಸಹಾಯದಿಂದ ರಾಶಿದ್‌ನನ್ನು ಮೇಲೆತ್ತಿ ತಕ್ಷಣವೇ ಶನಿವಾರಸಂತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ವೈದ್ಯರ ಸಲಹೆ ಮೇಲೆಗೆ ಹಾಸನದ ಹಿಮ್ಸ್ ಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಘಟನೆ ಸೋಷಿಯಲ್ ಮೀಡಿಯಾದ ಹವ್ಯಾಸಗಳ ಅಪಾಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.