ಹಾಸನ; ಸಿಡಿಲು ಬಡಿದು ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ತಾಲ್ಲೂಕಿನ, ದುದ್ದ ಹೋಬಳಿ, ಕುದುರುಗುಂಡಿ ಗ್ರಾಮದಲ್ಲಿ ನಡೆದಿದೆ.
ಹಾಸನದ ಕೆಎಂಎಫ್‌ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿನೇಶ್ (21) ಮೃತಪಟ್ಟ ಯುವಕ.
ಇಂದು ಮಧ್ಯಾಹ್ನದ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ದಿನೇಶ್, ಮಳೆ ಶುರುವಾದ ಕಾರಣ ರಕ್ಷಣೆಗಾಗಿ ರಸ್ತೆ ಬದಿ ಬೈಕ್ ನಿಲ್ಲಿಸಿ ಮರದ ಕೆಳಗೆ ನಿಂತಿದ್ದರು.
ಮರದ ಹಠಾತ್ ಬಡಿದ ಸಿಡಿಲು ದಿನೇಶ್ ಅವರ ಪ್ರಾಣಪಕ್ಷಿಯನ್ನು ಹೊತ್ತೊಯ್ದಿತು.ಮೃತನ ಸಹೋದರ ಎರಡು ವರ್ಷಗಳ ಹಿಂದಷ್ಟೇ ಮೃತಪಟ್ಟಿದ್ದರು. ಆ ಆಘಾತದಿಂದ ಇವೇ ತರಿಸಿ ಕೊಳ್ಳುತ್ತಿದ್ದ ಕುಟುಂಬಕ್ಕೆ ಸಿಡಿಲಾಘಾತ ಉಂಟಾಗಿದೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.