ಪೆನ್ ಡ್ರೈವ್ ಹಂಚಿಕೆ; ಹಾಸನದಲ್ಲಿ ಎಸ್ಐಟಿ ವಶಕ್ಕೆ ಪಡೆದ ಇಬ್ಬರು ಯಾರು?

ಸೆನ್ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿಚಾರಣೆ

ಹಾಸನ: ಸಂಸದ ಪ್ರಜ್ವಲ್‌ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಇರುವ ಪೆನ್‌ಡ್ರೈವ್ ಹಂಚಿಕೆ ಪ್ರಕರಣದ ಆಯಾಮದಲ್ಲಿಯೂ ತನಿಖೆ ಚುರುಕುಗೊಳಿಸಿರುವ ಎಸ್ಐಟಿ ಹಾಸನದಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದೆ.

ಭಾನುವಾರ ಬೆಳಗ್ಗೆ ನಗರಕ್ಕೆ ಆಗಮಿಸಿರುವ ಹಾಸನ ಸೆನ್ ಠಾಣೆ ಪೊಲೀಸರನ್ನೊಳಗೊಂಡ ಎಸ್‌ಐಟಿ ಟೀಂ ಪೆನ್‌ಡ್ರೈವ್ ಹಂಚಿಕೆ ಸಂಬಂಧ ಯಲಗುಂದ ಗ್ರಾಮದ ಚೇತನ್ ಸೇರಿ ಇಬ್ಬರನ್ನು ವಶಕ್ಕೆ ಪಡೆದಿದೆ.

ನಗರದ ಎನ್.ಆರ್.ವೃತ್ತದಲ್ಲಿರುವ ಸೆನ್ ಪೊಲೀಸ್ ಠಾಣೆಯಲ್ಲಿ ವಶಕ್ಕೆ ಪಡೆದವರ ವಿಚಾರಣೆ ಆರಂಭಿಸಿದೆ. ಪೆನ್ ಡ್ರೈವ್ ಹಂಚಿಕೆಯಲ್ಲಿ ಈ ಇಬ್ಬರ ಪಾತ್ರ ಏನು? ಎನ್ನುವ ಮಾಹಿತಿ ಇನ್ನೂ‌ ಹೊರಬರಬೇಕಿದೆ.