ಹಾಸನ: ಕಾಫಿ ತೋಟದಲ್ಲಿ ಗಿಡಕ್ಕೆ ಸುತ್ತಿಕೊಂಡಿದ್ದ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಉರುಗತಜ್ಞ ದಸ್ತಗಿರ್ ರಕ್ಷಿಸಿದ ಘಟನೆ ಸಕಲೇಶಪುರ ತಾಲ್ಲೂಕಿನ, ಚಿಮ್ಮಿಕೋಲು ಗ್ರಾಮದಲ್ಲಿ ನಡೆದಿದೆ.
ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ರೋವಸ್ಟಾ ಕಾಫಿ ಗಿಡದ ಮೇಲೆ ಕೂತಿದ್ದ ಹಾವು ಕಂಡು ಬೆಚ್ಚಿಬಿದ್ದರು. ಅಪಾಯದ ಭೀತಿಯಿಂದ ಕಾಲ್ಕಿತ್ತರು.
ತೋಟದ ಮಾಲೀಕರ ಮನವಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಉರಗತಜ್ಞ ದಸ್ತಗೀರಿ ಬೃಹತ್ ಬ್ಲಾಕ್ ಕೋಬ್ರಾವನ್ನು ಸೆರೆ ಹಿಡಿದು ರಕ್ಷಿಸಿ ಅರಣ್ಯಕ್ಕೆ ಬಿಟ್ಟರು.