ಬಿರಡಳ್ಳಿಯಲ್ಲಿ ಕಾಫಿ ಬೆಳೆಗಾರನ ಮೇಲೆ ಕಾಡಾನೆ ದಾಳಿ; ಗಂಭೀರ ಗಾಯ

ಹಾಸನ: ತೋಟಕ್ಕೆ ತೆರಳುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿ ಸೊಂಡಿಲಿನಿಂದ ಎಸೆದು ಗಾಯಗೊಳಿಸಿದ ಘಟನೆ ಸಕಲೇಶಪುರ ತಾಲ್ಲೂಕಿನ, ಬಿರಡರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೃಷ್ಣೇಗೌಡ (43) ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದು ಸಕಲೇಶಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ.

ಮಳೆ ಬಿಡುವು ನೀಡಿದ‌ ಹಿನ್ನೆಲೆಯಲ್ಲಿ ಪತ್ನಿ ಜತೆಗೆ ಕಾಫಿ ತೋಟಕ್ಕೆ ತೆರಳುತ್ತಿದ್ದ ಕೃಷ್ಣೇಗೌಡ ಅವರ ಮೇಲೆ ಏಕಾಏಕಿ ಆನೆ ದಾಳಿ ಮಾಡಿದೆ. ಗಾಯಾಳುವನ್ನು ಟ್ರ್ಯಾಕ್ಟರ್ ಮೂಲಕ ಒಂದು ಕಿ.ಮೀ. ಕರೆತಂದ ಪತ್ನಿ ನಂತರ ಜೀಪ್ ಮೂಲಕ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿದ್ದರು.