ಹಾಸನ: ಲಂಚ ಪಡೆಯುವಾಗ ಗ್ರಾಪಂ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಗರ ಹೊರವಲಯದ ಬಿ.ಕಾಟೀಹಳ್ಳಿಯಲ್ಲಿ ನಡೆದಿದೆ.
ಬಿ.ಕಾಟೀಹಳ್ಳಿ ಗ್ರಾ.ಪಂ.ನ ಲೋಕೇಶ್ ಲೋಕಾಯುಕ್ತ ಬಲೆಗೆ ಬಿದ್ದ ಬಿಲ್ ಕಲೆಕ್ಟರ್.
ಮೂರು ಇ-ಸ್ವತ್ತು ಮಾಡಿಕೊಡಲು ಗ್ರಾಮಸ್ಥರೊಬ್ಬರಿಂದ ಹದಿನೈದು ಸಾವಿರ ಲಂಚ ಕೇಳಿದ್ದ ಆತ ಇಂದು ಒಂದು ಇ-ಸ್ವತ್ತು ಮಾಡಿಕೊಟ್ಟು ಮೂರು ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಲೆಗೆ ಬೀಳಿಸಿದ್ದಾರೆ.
ಲಂಚದ ಹಣದ ಸಮೇತ ಸಿಕ್ಕಿಬಿದ್ದ ಲೋಕೇಶ್ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು, ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆದಿದೆ.