ಸ್ನಾನ‌ ಮಾಡುವ ಮಹಿಳೆಯ ಫೋಟೋ ತೆಗೆದು ಬ್ಲಾಕ್ ಮೇಲ್; ಕಾಮುಕನ ವಿರುದ್ಧ ದೂರು ದಾಖಲಿಸಿದ ಮಹಿಳೆ

ಲೈಂಗಿಕವಾಗಿ ಸಹಕರಿಸಲು ಒತ್ತಾಯಿಸುತ್ತಿದ್ದ ಕಾಮುಕನ ವಿರುದ್ಧ ದೂರು

ಹಾಸನ: ಸ್ನಾನ ಮಾಡುವ ಮಹಿಳೆಯ ಫೋಟೋ ತೆಗೆದು, ಲೈಂಗಿಕವಾಗಿ ಸಹಕರಿಸದಿದ್ದರೆ ಆ ಫೋಟೋ ವೈರಲ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿರುವ ವಿಕೃತ ಕಾಮುಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಅರಕಲಗೂಡು ತಾಲ್ಲೂಕಿನಲ್ಲಿ ನಡೆದಿದೆ.

ತಾಲ್ಲೂಕಿನ ಗ್ರಾಮವೊಂದರ ಲಕ್ಷ್ಮೀಶ್ ಎಂಬಾತ ಮಹಿಳೆಯೊಬ್ಬರು ಸ್ನಾನ ಮಾಡುವಾಗ ಕಿಟಕಿಯಿಂದ ನಗ್ನ ಫೋಟೋ ಗಳನ್ನು ಕ್ಲಿಕ್ಕಿಸಿ ಆ ಮಹಿಳೆಗೇ ಫೋಟೋ ಕಳುಹಿಸಿ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದ.

ಅಶ್ಲೀಲ ಫೋಟೋಗಳು ವೈರಲ್ ಆಗುವ ಭೀತಿಯಿಂದ ಮಹಿಳೆ ಚಿಂತಾಕ್ರಾಂತರಾಗಿ ಮನ ನೊಂದಿದ್ದಾರೆ. ಈ ವಿಚಾರವಾಗಿ ಕೆಲ ದಿನಗಳ ಹಿಂದೆ ಲಕ್ಷ್ಮೀಶನಿಗೆ ಗ್ರಾಮದ ಹಿರಿಯರು ಸೇರಿ ಬುದ್ಧಿ ಹೇಳಿದ್ದರು. ಆದರೆ ಆತ ಬದಲಾಗದೆ ಬ್ಲಾಕ್ ಮೇಲ್ ಮಾಡುವುದನ್ನು ಮುಂದುವರಿಸಿದ್ದ.

ಹೀಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಮಹಿಳೆ ಆತನ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.