ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಓರ್ವ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

ಹಾಸನ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಬೈಕ್ ಸವಾರ ಮೃತಪಟ್ಟು ಮತ್ತೋರ್ವನ ಬೈಕ್ ಗಂಭೀರವಾಗಿ ಗಾಯಗೊಂಡ ಘಟನೆ ಅರಕಲಗೂಡು ತಾಲ್ಲೂಕಿನ, ಕೊಣನೂರು ಹೋಬಳಿ, ಮರಿಯಾ ನಗರದ ಬಳಿ ನಡೆದಿದೆ.

ಮರಿಯಾ ನಗರದ ಗಣೇಶ್ (40) ಮೃತ ವ್ಯಕ್ತಿ, ಸಮಗಂಭೀರವಾಗಿ ಗಾಯಗೊಂಡ ಮತ್ತೋರ್ವ ಬೈಕ್‌ ಸವಾರ ಸುರೇಶ್‌ ಎಂಬವರನ್ನು ಚಿಕಿತ್ಸೆಗಾಗಿ ಹಿಮ್ಸ್ ಗೆ ರವಾನಿಸಲಾಗಿದೆ.

ಗಣೇಶ್‌ಗೆ ಸೇರಿದ KA-13-V-1385 ನಂಬರ್‌ನ ಪ್ಯಾಶನ್ ಬೈಕ್, ಸುರೇಶ್‌ಗೆ ಸೇರಿದ KA-13-E-Z-6675 ನಂಬರ್‌ನ ಹೋಂಡಾ ಶೈನ್ ಬೈಕ್ ಮುಖಾಮುಖಿ ಡಿಕ್ಕಿಯಾಗಿವೆ.
ಕೊಣನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಅಪಘಾತಕ್ಕೊಳಗಾದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.