ಬೇಲೂರು ರಸ್ತೆಯಲ್ಲಿ ಕಿಯಾ-ಕೆಎಸ್ಆರ್ಟಿಸಿ ಬಸ್ ಮುಖಾಮುಖಿ ಡಿಕ್ಕಿ; ಮೂವರ ಸ್ಥಿತಿ ಚಿಂತಾಜನಕ

ಕಾರಿನಲ್ಲಿದ್ದವರು ದಾವಣಗೆರೆ ಮೂಲದವರು| ಅಪಘಾತದ ರಭಸಕ್ಕೆ ಕಾರು ನುಜ್ಜುಗುಜ್ಜು

ಹಾಸನ: ಬೇಲೂರು- ಹಾಸನ ರಸ್ತೆಯ ಕೀರಿಹಳ್ಳಿ ಗಡಿ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಳಾಗಿದ್ದು, ಮೂವರ ಸ್ಥಿತಿ ಚಿಂತಾಜನಕಾಗಿದೆ.

ಕಾರಿನಲ್ಲಿದ್ದ ದಾವಣಗೆರೆ ಮೂಲದ ಚೇತನ್, ನಾಗರಾಜ್, ಚೇತನ್ ಎಂಬುವವರ ಸ್ಥಿತಿ ಚಿಂತಾಜನಕವಾಗಿದೆ. ಪುನೀತ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅಪಘಾತದಲ್ಲಿ ಸಾರಿಗೆ ಬಸ್‌ನ ನಿರ್ವಾಹಕನ ಕಣ್ಣಿಗೆ ಬಲವಾದ ಗಾಯಗಳಾಗಿದ್ದು, ಬಸ್‌ನಲ್ಲಿದ್ದ ನಾಲ್ಕು ಪ್ರಯಾಣಿಕರೂ ಗಾಯಗೊಂಡಿದ್ದಾರೆ. ಎಲ್ಲರನ್ನೂ ಹಾಸನದ ಹಿಮ್ಸ್ ಗೆ ದಾಖಲಿಸಲಾಗಿದೆ.

ಹಾಸನದ ಕಡೆಗೆ ಬರುತ್ತಿದ್ದ KA-57 F 4530 ನಂಬರ್‌ನ ಸಾರಿಗೆ ಬಸ್ ಗೆ ಧರ್ಮಸ್ಥಳಕ್ಕೆ ಭೇಟಿ ನೀಡಿ ದಾವಣಗೆರೆಗೆ ತೆರಳುತ್ತಿದ್ದ KA-17 MB-8067 ನಂಬರ್‌ನ ಕಾರು ಮುಖಾಮುಖಿ ಡಿಕ್ಕಿಯಾಗಿದೆ.

ಸ್ಥಳಕ್ಕೆ ಬೇಲೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.