ಹಾಸನದಲ್ಲಿ ಹೊತ್ತಿ ಉರಿದ ಪ್ಲೈವುಡ್ ಕಾರ್ಖಾನೆ

ಹಾಸನ: ನಗರ ಹೊರವಲಯದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಪ್ಲೈವುಡ್ ಕಾರ್ಖಾನೆಯೊಂದು ಅಗ್ನಿಗಾಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ನಗರ ಹೊರವಲಯದ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿರುವ ಸಂಕೇತ್ ಎಂಬವರಿಗೆ ಸೇರಿದ ಕಾರ್ಖಾನೆಯಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ ನೋಡು ನೋಡುತ್ತಲೇ ಧಗಧಗಿಸಿ ಉರಿಯಿತು.

ಕಾರ್ಖಾನೆಯಲ್ಲಿದ್ದ ಲಕ್ಷಾಂತರ ರೂ. ಬೆಲೆಬಾಳುವ ಪ್ಲೈವುಡ್, ಮರದ ದಿಮ್ಮಿಗಳು ಹೊತ್ತಿ ಉರಿದವು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.