ಹಾಸನ: ಈ ಚುನಾವಣೆಯಲ್ಲಿ ನನ್ನ ಮಾನ-ಮರ್ಯಾದೆ ಉಳಿಯಬೇಕೆಂದರೆ ಶ್ರೇಯಸ್‌ಪಟೇಲ್‌ಗೆ ಮತ ನೀಡಿ, ನನ್ನ ಮಾನ-ಮರ್ಯಾದೆ ಉಳಿಸುವುದು ನಿಮ್ಮ ಕೈಯ್ಯಲ್ಲಿದೆ ಎಂದು ಶಾಸಕ, ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಅರಸೀಕೆರೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಅರಸೀಕೆರೆ ಇನ್ನಷ್ಟು ಅಭಿವೃದ್ಧಿ ಆಗಬೇಕಾದರೆ ನೀವು ಯಾವಾಗಲೂ ಒತ್ತಾಯಿಸುತ್ತಿದ್ದೀರಲ್ಲಾ ಅರಸೀಕೆರೆಗೆ ಮಂತ್ರಿ ಕೊಡಬೇಕು ಎಂದು ಹಾಗೆಯೇ ನಾನು ಮಂತ್ರಿ ಆಗಬೇಕು ಅಂದರೆ ಶ್ರೇಯಸ್ ಪಟೇಲ್‌ಗೆ ಓಟು ಹಾಕಿ ಎಂದು ಮನವಿ ಮಾಡಿದರು.
ನಿಂತಿರುವ ಇಬ್ಬರೂ ಅಭ್ಯರ್ಥಿಗಳನ್ನು ನೋಡಿ, ಕಳೆದ ಬಾರಿ ನಾವೆಲ್ಲ ಸೇರಿ ಅವರನ್ನು ಗೆಲ್ಲಿಸಿದೆವು ಅವರು, ಐದು ವರ್ಷದಲ್ಲಿ ಒಂದೇ ಒಂದು ಸಾರಿ ಬಂದು ನಿಮ್ಮ ಮುಖ ನೋಡಲಿಲ್ಲ, ನಿಮಗೆ ಮುಖ ತೋರಿಸಲಿಲ್ಲ ಎಂದು ಪ್ರಜ್ವಲ್ ರೇವಣ್ಣ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಜಿಲ್ಲೆಯಲ್ಲಿ ಒಂದು ಕುಟುಂಬ ಸಾರ್ವಭೌಮತ್ವವನ್ನು ಪಡೆದಿದೆ, ಅವರಿಗೆ ಸಾರ್ವಭೌಮತ್ವ ಕೊಟ್ಟಿರುವುದು ಸಾಕು.
ಈ ಬಾರಿ ಶ್ರೇಯಸ್‌ಪಟೇಲ್‌ಗೆ ಮತ ಕೊಡಿ ಎಂದು ಮನವಿ ಮಾಡಿದರು.
ಹಾಸನ ಜನ ಬುದ್ದಿವಂತರಿದ್ದಾರೆ, ಕಾಲಕ್ಕೆ ತಕ್ಕ ನಿರ್ಣಯ ಮಾಡ್ತಾರೆ ಎನ್ನುವುದನ್ನು ಈ ಚುನಾವಣೆಯಲ್ಲಿ ತೋರಿಸಿ. ನಾನು ಅರಸೀಕೆರೆ ಅಭಿವೃದ್ಧಿಗಾಗಿ ರಾಜ್ಯ ನಾಯಕರ ಬಳಿ ಹೋಗಿ ಮುಖ ತೋರಿಸಿ ಕೆಲಸ ಕೇಳಬೇಕಾದರೆ ಅತ್ಯಧಿಕ ಮತ ಶ್ರೇಯಸ್‌ಪಟೇಲ್‌ಗೆ ಮತ ನೀಡಿ ಎಂದು ಕೋರಿದರು.
ಐದು ಗ್ಯಾರೆಂಟಿ ಕೊಟ್ಟಿರುವ ಸಿದ್ದರಾಮಯ್ಯ ಅವರನ್ನು ಉಳಿಸಿಕೊಳ್ಳಿ, ವರ್ಷಕ್ಕೆ ಅರವತ್ತು ಸಾವಿರ ಕೋಟಿ ಬಡವರಿಗೆ, ರೈತರಿಗೆ ನೀಡುತ್ತಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಶ್ರೇಯಸ್‌ಪಟೇಲ್‌ಗೆ ಮತ ನೀಡಿ ಗೆಲ್ಲಿಸಿ ಸಿದ್ದರಾಮಯ್ಯ ಅವರನ್ನು ಉಳಿಸಿ ಎಂದರು.