ಬೇಲೂರು ಬಿಜೆಪಿ ಶಾಸಕ ಹುಲ್ಲಳ್ಳಿ ಸುರೇಶ್ ಗೆ ಗಾಳ ಹಾಕಿದ್ರಾ ಡಿಕೆಶಿ?

ಕುಮಾರಣ್ಣ ತೆನೆ ಹೊತ್ತ ಮಹಿಳೆಯನ್ನು ಕಳುಹಿಸಿ ಕಮಲ ತಬ್ಬಿಕೊಂಡರು.

ಹಾಸನ: ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರು ನೀಡಿರುವ ಪಟ್ಟಿಯಲ್ಲಿನ ಎಲ್ಲ ಕಾಮಗಾರಿಗಳನ್ನು ಮಾಡಿಸುತ್ತೇನೆ. ಪ್ರತಿಯಾಗಿ ಅವರು ಋಣ ತೀರಿಸಬೇಕು ಎನ್ನುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಬಿಜೆಪಿ ಶಾಸಕ ಹುಲ್ಲಳ್ಳಿ ಸುರೇಶ್ ಅವರನ್ನು ಕಾಂಗ್ರೆಸ್ ಗೆ ಆಹ್ವಾನಿಸಿದರು.

ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೇಲೂರು ಶಾಸಕರು ರೂ. 120 ಕೋಟಿಯ ಕೆಲಸಗಳ ಪಟ್ಟಿ ನೀಡಿದ್ದಾರೆ. ಸುರೇಶ್ ಅವರೇ ಆ ಕಾರ್ಯಕ್ರಮಗಳನ್ನು ನಾನೇ ಉದ್ಘಾಟನೆ ಮಾಡ್ತೇನೆ.ಅದರ ಋಣ ತೀರಿಸುವ ಕೆಲಸ ನೀವು ಮಾಡಬೇಕು ಅದರ ಋಣವನ್ನು ನಮ್ಮ ಮೇಲೆ ತೋರಿಸಬೇಕು ಎಂದರು.

ನಾವು ಎಲ್ಲಾ ಜಾತಿಗಳಿಗೂ ಗ್ಯಾರೆಂಟಿ ಕೊಟ್ಟಿದ್ದೇವೆ. ನಮಗೆ ಜಾತಿ ಇಲ್ಲ ನೀತಿ ಇದೆ. ನಾವು ದೇವರ ಹೆಸರು ಹೇಳಿಕೊಂಡು ರಾಜಕಾರಣ ಮಾಡಲ್ಲ ಎಂದರು.

ಕುಮಾರಣ್ಣ ತೆನೆ ಹೊತ್ತ ಮಹಿಳೆಯನ್ನು ಕಳುಹಿಸಿ ಕಮಲ ತಬ್ಬಿಕೊಂಡರು. ಮುಂದಿನ ಚುನಾವಣೆಯಲ್ಲಿ ಕೈ ಹಿಡಿಯಿರಿ, ಆಶೀರ್ವಾದ ಮಾಡಿ, ನಿಮ್ಮ ಜೊತೆ ನಾವಿದ್ದೇವೆ ಎಂದರು.

ಈ ವರ್ಷ ಮಳೆಯಾಗಿ, ನೀರು ಬರಲಿ ಈಗಾಗಲೇ ಎಲ್ಲಾ ತೊಡಕುಗಳನ್ನು ನಿವಾರಿಸಿದ್ದೇವೆ. ಅರಣ್ಯ ಇಲಾಖೆಯ ಒಂದಿಷ್ಟು ತೊಡಕು ಇದೆ. ಮುಂದಿನ ವರ್ಷ ಎತ್ತಿನಹೊಳೆಯಿಂದ ನೀರು ಹರಿಸುತ್ತೇವೆ. ಎಲ್ಲಾ ಕೆರೆಗಳನ್ನು ತುಂಬಿಸುತ್ತೇವೆ ಎಂದು ಭರವಸೆ ನೀಡಿದರು.