ಹಾಸನ: ನನ್ನನ್ನು ಡಿಸಿಎಂ ಮಾಡಿ ಅಂತ ಕೇಳಿಲ್ಲ, ನನಗೆ ಅದು ಬೇಕಾಗಿಯೂ ಇಲ್ಲ. ಪಕ್ಷದ ಹಿತದೃಷ್ಟಿಯಿಂದ ಜಾತಿವಾರು ಮೂವರು ಉಪಮುಖ್ಯಮಂತ್ರಿಗಳನ್ನು ಮಾಡಿ ಎಂದು ಸಲಹೆ ನೀಡಿದ್ದೇನಷ್ಟೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿವಾರು ಡಿಸಿಎಂ ಮಾಡಬೇಕು ಎನ್ನುವ ವಿಚಾರ ಡಿಮ್ಯಾಂಡ್ ಇದೆ, ಅದರಲ್ಲಿ ಏನಾದರೂ ಅನುಮಾನ ಬಂದಿದೆಯಾ? ಇದರಲ್ಲಿ ಮುಚ್ಚುಮರೆ ವ್ಯವಹಾರ ಏನಿಲ್ಲ ಎಂದರು.
ನಾನ್ನಂತೆಯೇ ಬಹಳಷ್ಟು ಸಚಿವರು ಅದೇ ಅಭಿಪ್ರಾಯವನ್ನು ಹೇಳಿದ್ದಾರೆ. ಕೇಂದ್ರದ ಮುಖಂಡರ ಗಮನಕ್ಕೂ ಈ ಅಂಶ ಗೊತ್ತಿದೆ. ಅಂತಿಮವಾಗಿ ಹೈಕಮಾಂಡ್‌ನಲ್ಲಿ ನಿರ್ಣಯ ಆಗುತ್ತೆ ಎಂದರು.
ಅಸಹಾಯಕ, ಧ್ವನಿ ಇಲ್ಲದ ಸಮುದಾಯದವರಿಗೆ ರಾಜಕೀಯ ಅಧಿಕಾರ ಕೊಟ್ಟಾಗ ಪಕ್ಷದ ಮೇಲೆ ಆ ಸಮುದಾಯದ ಜನರಿಗೆ ಪ್ರೀತಿ ಬರುತ್ತೆ. ಆ ದೃಷ್ಟಿಯಿಂದ ನಾವು ಸಲಹೆ ಕೊಟ್ಟಿದ್ದೇವೆ ಎಂದರು.