ಹಾಸನ; ನಾನು ಚುನಾವಣೋತ್ತರ ಸಮೀಕ್ಷೆ ನಂಬುವುದಿಲ್ಲ. ಚನ್ನಪಟ್ಟಣ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಪೋಲ್ ಫೇಲ್ ಆಗಿದ್ದವು.
ಎನ್‌ಡಿಎಗೆ 400 ಸೀಟ್ ಬರಲಿದೆ ಎಂದು ಏಗ್ಸಿಟ್ ಪೋಲ್ ಗಳು ಹೇಳಿದ್ದವು. ಆದರೆ ಕೇವಲ 240 ಸ್ಥಾನ ಸಿಕ್ಕಿದವು. ಇನ್ನೊಂದು ಇಪ್ಪತ್ತು ನೆಗೆದಿದ್ದರೆ ಮೋದಿ ಕಥೆ ಮುಗಿದು ಹೋಗುತ್ತಿತ್ತು.
ಇತ್ತೀಚೆಗೆ ಎಗ್ಸಿಟ್ ಪೋಲ್ ಫೇಲ್ ಆಗಿವೆ. ನಾನು ಎಗ್ಸಿಟ್ ಪೋಲ್ ನಂಬಲ್ಲ. ಎರಡು ದಿನಗಳಲ್ಲಿ ರಿಸಲ್ಟ್ ಬರುತ್ತದೆ. ಜನ ಏನು ತೀರ್ಪು ಕೊಟ್ಟಿದ್ದಾರೋ ಅದನ್ನು ಒಪ್ಪಿಕೊಳ್ಳಲೇಬೇಕು ಎಂದರು.
ಎಗ್ಸಿಟ್ ಪೋಲ್ ಬಗ್ಗೆ ನನಗೇನು ನಂಬಿಕೆ ಇಲ್ಲ. ಚನ್ನಪಟ್ಟಣದಲ್ಲಿ ಅಲ್ಪ ಮತಗಳಲ್ಲಾಗಲಿ, ಐದರಿಂದ ಹತ್ತು ಸಾವಿರದೊಳಗಾಗಲಿ ನಾವು ಗೆಲ್ತೀವಿ. ಗೆದ್ದೇ ಗೆಲ್ತಿವಿ ಅನ್ನುವ ಭರವಸೆ ಇದೆ. ನಮ್ಮ ಅಭ್ಯರ್ಥಿ ಯಾವ ಅರ್ಥದಲ್ಲಿ ನಿರಾಶಾದಾಯಕವಾಗಿದ್ದಾರೋ ಗೊತ್ತಿಲ್ಲ. ನಾನು ಆ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಿದ್ದೇನೆ.
ನನ್ನ ಅಭಿಪ್ರಾಯದ ಪ್ರಕಾರ ಜನ ಬಹಳ ಉತ್ಸುಕರಾಗಿದ್ದರು. ನನ್ನ ಪ್ರಕಾರ ಗೆದ್ದೇ ಗೆಲ್ತಿವಿ ಅನ್ನುವ ಭರವಸೆ ಇದೆ ಎಂದರು.