ದೇವೇಗೌಡರು ಬರುವುದಾದರೆ ಕ್ಷೇತ್ರ ಬಿಡಲು ತಯಾರು!: ಪ್ರಜ್ವಲ್ ರೇವಣ್ಣ

ಗೌಡರು ನನ್ನನ್ನು ಮೂರು ಬಾರಿ ಕರೆಸಿ ರಾಜೀನಾಮೆ ಕೊಡಬೇಡ ಅಂತ ಬೈದು ಕಳುಹಿಸಿದ್ರು; ದೇವೇಗೌಡರು ಸೋತ ಸಂದರ್ಭದಲ್ಲಿ ನಾನೇ ಮೊದಲು ಅವರ ಮನೆಗೆ ಹೋಗಿ ರಾಜೀನಾಮೆ ಕೊಡ್ತಿನಿ ನೀವು ನಿಲ್ಲಿ ಅಂತ ಹೇಳಿ ಬಂದಿದ್ದೆ.!

ಹಾಸನ : ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನ ಜಿಲ್ಲೆಯಿಂದ ಸ್ಪರ್ಧಿಸಲಿ ಎಂಬ ಶಾಸಕ ಎ.ಮಂಜು ಹೇಳಿಕೆ ವಿಚಾರವಾಗಿ ಹಾಸನದಲ್ಲಿ ಸಂಸದ ಪ್ರಜ್ವಲ್‌ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

ನಮ್ಮಲ್ಲಿ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ನಮ್ಮ ಪಕ್ಷದ ಎಲ್ಲಾ ಮುಖಂಡರು ಚುನಾವಣೆಗಾಗಿ ಅವರದ್ದೇ ಆದ ತಯಾರಿ ನಡೆಸಿಕೊಳ್ಳುತ್ತಿದ್ದಾರೆ. ನಾನೂ ಕೂಡ ಚುನಾವಣೆ ತಯಾರಿಗಿಂತ ಮೊದಲು ಜನರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ. ಹಾಗೇನಾದರೂ ಅವಕಾಶ ಇದ್ದರೆ, ಅವರು ಬರುವುದಿದ್ದರೆ ನಾನು ಕ್ಷೇತ್ರ ಬಿಟ್ಟುಕೊಡ್ತಿನಿ ಎಂದರು.

ಇದೇ ದೇವೇಗೌಡರು ಸೋತ ಸಂದರ್ಭದಲ್ಲಿ ನಾನೇ ಮೊದಲು ಅವರ ಮನೆಗೆ ಹೋಗಿ ರಾಜೀನಾಮೆ ಕೊಡ್ತಿನಿ ನೀವು ನಿಲ್ಲಿ ಅಂತ ಹೇಳಿ ಬಂದಿದ್ದೆ.
ದೇವೇಗೌಡರು ನನ್ನನ್ನು ಮೂರು ಬಾರಿ ಕರೆಸಿ ರಾಜೀನಾಮೆ ಕೊಡಬೇಡ ಅಂತ ಬೈದು ಕಳುಹಿಸಿದ್ರು, ಅಧಿಕಾರ ಯಾರಿಗೂ ಶಾಶ್ವತವಲ್ಲ, ಕೇವಲ ಅಧಿಕಾರಕ್ಕಾಗಿ ಮಾತ್ರ ಹೋರಾಟ ಮಾಡಬಾರದು ಎಂದರು
ದೇವೇಗೌಡರು ಬರ್ತಾರೆ ಅಂದ್ರೆ ನಾನು ಸ್ವಾಗತ ಮಾಡಲು ತಯಾರಿದ್ದೀನಿ. ಅವರು ಬಿಟ್ಟುಕೊಟ್ಟ, ಅವರು ಆಶೀರ್ವಾದ ಮಾಡಿದಂತಹ ಸೀಟ್ ಇದು. ಹಾಗಾಗಿ ಬರ್ತಾರೆ ಅಂದ್ರೆ ಸಂತೋಷವಾಗಿ ಸ್ವಾಗತ ಮಾಡ್ತಿನಿ.
ಅವರು ಬರ್ತಿನಿ ಅಂದರೆ ಸಂತೋಷವಾಗಿ ಕರೆದುಕೊಂಡು ಬಂದು ನನ್ನ ಚುನಾವಣೆಗೆ ಏನು ಕ್ಯಾಂಪೇನ್ ಮಾಡ್ತಿದ್ನೋ ಅದರ ಮೂರುಪಟ್ಟು ಕ್ಯಾಂಪೇನ್ ಮಾಡ್ತಿನಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.