ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿ: ಮಹಿಳೆ ಸ್ಥಳದಲ್ಲೆ ಸಾವು

ಹೊಳೆನರಸೀಪುರ, ಮಾ. 28 ತಾಲೂಕಿನ ಹೊನ್ನಿಕೊಪ್ಪಲು ತಿರುವಿನ ಸಮೀಪದ ಇಳಿಜಾರಿನಲ್ಲಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟರು.

ರಂಗೇನಹಳ್ಳಿಯ ಶಂಕರೇಗೌಡ ಎಂಬವರ ಪತ್ನಿ ಮಂಜುಳ (38) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶುಕ್ರವಾರ ನೆಂಟರ ಮನೆಯಲ್ಲಿ ಪೂಜೆಗಾಗಿ ತೆರಳಿದ್ದ ಮಂಜುಳ, ಸಂಬಂಧಿಕರೊಂದಿಗೆ ಸ್ವಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಬೆಂಗಳೂರಿನಿಂದ ಸೋಮವಾರಪೇಟೆಗೆ ತೆರಳುತ್ತಿದ್ದ ಅರಕಲಗೂಡು ಡಿಪೋದ ಕೆಎಸ್‌ಆರ್‌ಟಿಸಿ ಬಸ್ (ಕೆಎ 13 ಎಫ್ 2273) ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಈ ಘಟನೆಯಲ್ಲಿ ಮಂಜುಳ ಸ್ಥಳದಲ್ಲೇ ಕೊನೆಯುಸಿರೆಳೆದರು. ಬೈಕ್ ಚಾಲನೆ ಮಾಡುತ್ತಿದ್ದ ವ್ಯಕ್ತಿಗೆ ಸಣ್ಣ ಗಾಯಗಳಾಗಿದ್ದು, ಪ್ರಕರಣವನ್ನು ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.