ರೇವಣ್ಣ ಆಪ್ತ ಕೃಷ್ಣೇಗೌಡ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ ಆಪ್ತ‌, ಉದ್ಯಮಿ ಕೃಷ್ಣೇಗೌಡ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ತಲೆ ಮರೆಸಿಕೊಂಡಿರುವಪ್ರಕರಣದ ಪ್ರಮುಖ ಆರೋಪಿ ಯೋಗಾನಂದನ ಪತ್ನಿ, 7ನೇ ಆರೋಪಿಗಳಾದ ಸುಧಾರಾಣಿ ಮತ್ತು ಅವನ ಭಾಮೈದನ ಪತ್ನಿ ಚೈತ್ರಾ ಅವರಿಗೆ ಹೈಕೋರ್ಟ್ ನ. 2ರಂದು ಜಾಮೀನು ನೀಡಿದೆ.
ಒಂದು ಲಕ್ಷ ರೂ.ವೈಯಕ್ತಿಕ ಬಾಂಡ್ ಹಾಗೂ ಇತರ ಶರತ್ತುಗಳೊಂದಿಗೆ ಕೋರ್ಟ್ ಜಾಮೀನು ನೀಡಿದೆ.
ಪ್ರಕರಣದ ಪ್ರಮುಖ ಆರೋಪಿ ಯೋಗಾನಂದ್ ಬಂಧನಕ್ಕೆ ಪೊಲೀಸರು ಇನ್ನೂ ಬೆವರು ಹರಿಸುತ್ತಿರುವಾಗಲೇ ಇಬ್ಬರು ಆರೋಪಿಗಳಿಗೆ ಜಾಮೀನು ದೊರಕಿದೆ.

ಆರೋಪಿಗಳ ಪರ ವಕೀಲ ಸಂದೀಪ್ ವಾದ ಮಂಡಿಸಿದ್ದರು.