ವಿಧಾನ ಪರಿಷತ್ ಚುನಾವಣೆ: ಹಾಸನದಲ್ಲಿಂದು ಜೆಡಿಎಸ್ ಮುಖಂಡರ ಸಭೆ ನಡೆಸಲಿದ್ದಾರೆ ಎಚ್.ಡಿ.ರೇವಣ್ಣ

ದೇವಾಯಗಳಿಗೆ ಭೇಟಿ| ಪೂಜೆ ಸಲ್ಲಿಸಲಿರುವ ರೇವಣ್ಣ

ಹಾಸನ : ಇಪ್ಪತ್ತು ದಿನಗಳ ಬಳಿಕ ತವರಿಗೆ ಆಗಮಿಸಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಇಂದು ದೇವಾಲಯಗಳಿಗೆ ಭೇಟಿ ನೀಡಿದ ನಂತರ ನಗರದ ನಿವಾಸದಲ್ಲಿ ಬೆಳಗ್ಗೆ 11 ಗಂಟೆಗೆ ಪಕ್ಷದ ಮುಖಂಡರ ಸಭೆ ನಡೆಸಲಿದ್ದಾರೆ.

ಎಚ್.ಡಿ.ದೇವೇಗೌಡರ ಹುಟ್ಟೂರು ಹರದನಹಳ್ಳಿಯಲ್ಲಿ ವಾಸ್ತವ್ಯ ಹೂಡಿರುವ ಮಾಜಿಸಚಿವ ಎಚ್.ಡಿ.ರೇವಣ್ಣ, ಇಂದು ಮನೆದೇವರು ಹರದನಹಳ್ಳಿಯ ದೇವೇಶ್ವರನಿಗೆ ಪೂಜೆ ಸಲ್ಲಿಸುವರು. ನಂತರ ಮಾವಿನಕೆರೆ ರಂಗನಾಥಸ್ವಾಮಿ ಹಾಗೂ ಹೊಳೆನರಸೀಪುರದ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಗಳಿಗೆ ಭೇಟಿ ನೀಡುತ್ತಾರೆ.

ಬೆ.11 ಗಂಟೆಗೆ ಹಾಸನಕ್ಕೆ ಆಗಮಿಸುವ ಕೆ.ಆರ್.ಪುರಂ ನಿವಾಸದಲ್ಲಿ ಮುಂಬರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ವಿವೇಕಾನಂದ ಪರ ಚುನಾವಣಾ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು ಮತ್ತು ತಾಲೂಕು ಘಟಕಗಳ ಜೆಡಿಎಸ್ ಅಧ್ಯಕ್ಷರು ಭಾಗಿಯಾಗುವರು.