ಹೊಳೆನರಸೀಪುರದಲ್ಲಿ ಪೊಲೀಸರೊಂದಿಗೆ ರೇವಣ್ಣ ಅಭಿಮಾನಿಗಳ ವಾಗ್ವಾದ: ಪಟಾಕಿ ಕಿತ್ತುಕೊಂಡ ಪೊಲೀಸರು

ಹಾಸನ: ಹೊಳೆನರಸೀಪುರದಲ್ಲಿ ಪಟಾಕಿ ಸಿಡಿಸಲು ಅಡ್ಡಿಪಡಿಸಿದ ಪೊಲೀಸರೊಂದಿಗೆ ಎಚ್.ಡಿ.ರೇವಣ್ಣ ಅಭಿಮಾನಿಗಳು ವಾಗ್ವಾದ ನಡೆಸಿದ್ದಾರೆ.

ಹೊಳೆನರಸೀಪುರದ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಲು ಅಡ್ಡಿಪಡಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್ ಪಟಾಕಿಗಳ ರೋಲ್ ಕಿತ್ತುಕೊಂಡರು. ಇದರಿಂದ ಆಕ್ರೋಶಗೊಂಡ ಜೆಡಿಎಸ್ ಬೆಂಬಲಿಗರು ವಾಗ್ವಾದಕ್ಕಿಳಿದರು.

ಕಾಂಗ್ರೆಸ್‌ನವರಿಗೆ ಅನುಮತಿ ನೀಡಿದ್ದೀರಾ ನಮಗೂ
ಪಟಾಕಿ ಸಿಡಿಸಲು ಅನುಮತಿ ನೀಡುವಂತೆ ಒತ್ತಾಯಿಸಿದರು.

ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ರೇವಣ್ಣ ಪರ ಘೋಷಣೆಗಳನ್ನು ಕೂಗಿದ ಅಭಿಮಾನಿಗಳು ಪಟಾಕಿ ಸಿಡಿಸಲು ಅನುಮತಿ ನೀಡುವಂತೆ ಡಿವೈಎಸ್‌ಪಿ ಅಶೋಕ್ ಜತೆಗೂ ವಾಗ್ವಾದಕ್ಕಿಳಿದರು.