ಎನ್.ಆರ್.ಸಂತೋಷ್ ವಿಧಾನಸಭೆಗೆ, ವಿಧಾನ ಪರಿಷತ್ ಗೆ ಬಾಣಾವರ ಅಶೋಕ್; ಅರಸೀಕೆರೆ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ದೇವೇಗೌಡರ ಘೋಷಣೆ

ಲೋಕಸಭೆ ಚುನಾವಣೆ ಸಿದ್ಧತೆ ಸಭೆಯಲ್ಲಿ ವಿಧಾನಸಭೆ ಚುನಾವಣೆ ಬಗ್ಗೆ ಮಾತನಾಡಿದ ದೇವೇಗೌಡರು

ಹಾಸನ: ಲೋಕಸಭೆ ಚುನಾವಣೆ ಹಿನ್ನೆಲೆ ಯಲ್ಲಿ ಎರಡು ದಿನಗಳ ಜಿಲ್ಲಾ ಪ್ರವಾಸ ಕೈಗೊಂಡಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಇಂದು ಅರಸೀಕೆರೆಯಲ್ಲಿ ಸಭೆ ನಡೆಸಿದ್ದು ವಿಧಾನಸಭೆ ಚುನಾವಣೆ ಸೋಲು-ಗೆಲುವಿನ ಪರಾಮರ್ಶೆ ಮಾಡಿದ್ದಾರೆ.

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಗೆದ್ದಿರುವ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಹರಿತ ಮಾತುಗಳಿಂದ ಠಕ್ಕರ್ ಕೊ ಟ್ಟಿದ್ದಾರೆ.

ಲಿಂಗಾಯತ ಸಮುದಾಯಕ್ಕೆ ಏನು ಅನ್ಯಾಯ ಮಾಡಿದ್ದೇನೆ ಹೇಳಿ. ಅರಸೀಕೆರೆಗೆ ಕುಡಿಯುವ ನೀರಿಗೆ 24 ಬೋರ್‌ವೆಲ್ ಹಾಕಿಸಿದೆ, ಆದರೆ ಕುಡಿಯುಲು ನೀರು ಯೋಗ್ಯವಲ್ಲ ಅಂದರು. ಹೇಮಾವತಿ ನದಿಯಿಂದ ನೇರವಾಗಿ ನೀರು ತಂದೆ. ಯಾವುದೇ ಒಬ್ಬ ವ್ಯಕ್ತಿಯ ಹೆಸರು ಹೇಳಿ ಮತ ಕೇಳಲು ಬಂದಿಲ್ಲ. ಅವರು ದೊಡ್ಡವರಿರಬಹುದು ಅವರ ಬಗ್ಗೆ ಮಾತನಾಡಲ್ಲ ಎಂದು ಶಿವಲಿಂಗೇಗೌಡರ ವಿರುದ್ಧ ಪರೋಕ್ಷವಾಗಿ ಗುಡುಗಿದರು.

ಕಳೆದ ಚುನಾವಣೆಯಲ್ಲಿ ಸಂತೋಷ್ ನಿಂತಾಗ ಸ್ವಲ್ಪಮಟ್ಟಿಗೆ ಮನಸ್ಸಿನಲ್ಲಿ ಸಂಶವಿತ್ತು, ಕಾರಣ ಬೇರೆ ಇತ್ತು. ನಾನು ಜ್ಯೋತಿಷ್ಯವನ್ನು ನಂಬುತ್ತೇನೆ. ಅಶೋಕ್ ಗ್ರಹಗತಿ ಬಗ್ಗೆ ಕೇಳಿದೆ‌, ಸ್ವಲ್ಪ ಮಟ್ಟಿಗೆ ತೊಂದರೆ ಇತ್ತು. ಅದಕ್ಕಾಗಿ ಸಂತೋಷ್ ನಿಲ್ಲಿಸಿದೆ.

ಇವತ್ತು ಸಭೆಯಲ್ಲಿ ವೇದಿಕೆ ಮೇಲೆ ಹೇಳ್ತಿನಿ.
ಅರವತ್ತು ವರ್ಷ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಜೊತೆ ನಾನು ಹೋರಾಟ ಮಾಡ್ದೆ, ನನ್ನನ್ನು ತುಳಿದರು. ಮೋದಿ ಪಕ್ಕ ಕುಮಾರಸ್ವಾಮಿ, ರೇವಣ್ಣ ನಿಂತಿದ್ದರು. ಅವರನ್ನು ಬಿಟ್ಟು ನನ್ನನ್ನು ಕೈ ಹಿಡಿದು ಕೂರಿಸಿ ನೀವು ದೇಶಕ್ಕೆ ಸೇವೆ ಮಾಡಿದ್ದೀರಾ ಎಂದರು.

ನನ್ನ ಜೀವನದ ಕಡೆಯ ಘಟ್ಟದಲ್ಲಿ ಇದ್ದೇನೆ, ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. ನಾನು ಹೋಗುವ ಮುಂಚೆ ಅರಸೀಕೆರೆಯಲ್ಲಿ ಯಾರನ್ನು ನಿಲ್ಲಿಸಬೇಕು ಹೇಳಿ.
ಅಶೋಕ್ ಮನಸ್ಸಿನಿಂದ ಹೇಳು ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖಂಡ ಬಾಣಾವರ ಅಶೋಕ್, ಸಂತೋಷ್ ಅವರನ್ನೇ ನಿಲ್ಲಿಸಿ ಎಂದರು.

ನಂತರ ಮಾತು ಮುಂದುವರಿಸಿದ ದೇವೇಗೌಡರು ಮುಂದೆ ಎನ್.ಆರ್. ಅಶೋಕ್ ವಿಧಾನಸಭೆಗೆ ಹೋಗಲಿ, ಬಾಣಾವರ ಅಶೋಕ್ ವಿಧಾನ ಪರಿಷತ್ ಗೆ ಹೋಗಲಿ, ದೇವೇಗೌಡ ಅಶೋಕ್ ಗೆ ಮೋಸ ಮಾಡುವುದಿಲ್ಲ ಎಂದರು.