ಹಾಸನ (HASSAN): ತಮ್ಮ ತಂದೆ ದೇವೇಗೌಡರಿಗೆ 1962 ರಿಂದ ರಾಜಕೀಯ ಜನ್ಮ ನೀಡಿ ಶಕ್ತಿ ತುಂಬಿದ ಜಿಲ್ಲೆಯಲ್ಲಿ ಆಗದೇ ಉಳಿದಿರುವ ಯೋಜನೆ ಪೂರ್ಣಗೊಳಿಸಿ, ಸಮಗ್ರ ಅಭಿವೃದ್ಧಿ ಮಾಡಿದ ನಂತರವೇ ತಾವು ರಾಜಕೀಯ ನಿವೃತ್ತಿ ಪಡೆಯುವುದಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ರಾಜಕೀಯವಾಗಿ ಹಲವು ಸ್ಥಾನಮಾನ ಪಡೆಯಲು, ಮುಖ್ಯಮಂತ್ರಿ, ಸಿಎಂ ಆಗಲು ಹಾಸನ ಹಾಗೂ ಕನಕಪುರ ಲೋಕಸಭಾ ಕ್ಷೇತ್ರದ ಜನರು ಕಾರಣ ಎಂದರು. ದೇವೇಗೌಡರಲ್ಲದೆ ನಾನು ಜೊತೆಗೆ ದಿ.ಪ್ರಕಾಶ್, ಈಗ ಸ್ವರೂಪ್ ಮೊದಲಾದವರು ಗೆಲ್ಲು ಜನರೇ ಕಾರಣರಾಗಿದ್ದಾರೆ.
ಕೆಲವೊಮ್ಮೆ ಎಂಟಕ್ಕೆ ಎಂಟೂ ಸ್ಥಾನ ಗೆಲ್ಲಿಸಿದ್ದನ್ನು ನಾವು ಮರೆಯಲ್ಲ ಎಂದ ರೇವಣ್ಣ, ನನ್ನ ಕೊನೆ ಉಸಿರು ಇರೋವರೆಗೂ ಜಿಲ್ಲೆಯಲ್ಲಿ ಬಾಕಿ ಕೆಲಸ ಮುಗಿಸಲು ಸಿದ್ಧ ಎಂದರು.
ಹಿಂದೆ ಕುಮಾರಸ್ವಾಮಿ ಅವರು ಮಾಡಿರುವುದಲ್ಲಿ ಸ್ವಲ್ಪ ಬಾಕಿ ಇದೆ. ಯಾವುದೇ ಅಡೆತಡೆ ಬಂದರೂ ಪೂರ್ಣಗೊಳಿಸುವೆ, ಜಿಲ್ಲೆಯ ಜನರು ನೀಡಿರುವ ಸಹಕಾರ ಮರೆಯಲ್ಲ, ರಾಜ್ಯ ಸರ್ಕಾರ ಕೊಟ್ಟರೆ ಸಂತೋಷ, ಇಲ್ಲವಾದರೆ ಕೇಂದ್ರದ ನೆರವಿನಿಂದಲೇ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.
ಹಾಸನ, ಹೊಳೆನರಸೀಪುರದಲ್ಲಿ ರಿಂಗ್ ರೋಡ್ ಮಾಡಿಸಲು ಪ್ರಯತ್ನ ನಡೆಯುತ್ತಿದೆ, ಜಿಲ್ಲೆಗೆ ಏನೆಲ್ಲಾ ಆಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ನೋಡಿಕೊಂಡು ಮುಂದಡಿ ಇಡುವುದಾಗಿ ತಿಳಿಸಿದರು.
ನಾಲ್ಕು ವರ್ಷದಿಂದ ನಮ್ಮ ಪಾರ್ಟಿ ಮುಗಿಸಲು ಸಂಚು ಮಾಡುತ್ತಿದ್ದಾರೆ. ಕೆಲವರು ಇಲ್ಲಿ ಹೊಟ್ಟೆ ತುಂಬ ಮೇಯ್ದು ನಂತರ ಬೇರೆಡೆ ಮೇವು ಹುಡುಕಿಕೊಂಡು ಹೊಗಿದ್ದಾರೆ. ಹೋದರೆ ಹೋಗಲಿ ಎಂದು ಪಕ್ಷ ಬಿಟ್ಟು ಹೋಗಿರುವವರ ಬಗ್ಗೆ ಕಿಡಿ ಕಾರಿದರು.
ವಿಮಾನ ವಿಮಾನ ನಿಲ್ದಾಣಕ್ಕೆ ಸ್ವಾಧೀನ ಪಡಿಸಿದ್ದ ಜಾಗ ಹಾಗೆಯೇ ಉಳಿಯಬೇಕು ಎಂದು ಸಂಬಂಧಪಟ್ಟ ವರಿಗೆ ಸಾಕಷ್ಟು ಪತ್ರ ಬರೆದಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಯೋಜನೆ ಮಾಡಲಾಗಿದೆ. ಹಾಸನ ಸಮೀಪ 200 ಎಕರೆ ಪ್ರದೇಶದಲ್ಲಿ ಹಾಗೂ ಹೊಳೆನರಸೀಪುರ-ಅರಕಲಗೂಡು ನಡುವೆ ಸುಮಾರು 150 ಎಕರೆ ಪ್ರದೇಶದಲ್ಲಿ ಉದ್ಯಮ ಆರಂಭಿಸಲು ಚಿಂತಿಸಲಾಗಿದೆ ಎಂದರು.
ಈ ಸಂಬಂಧ ಕುಮಾರಸ್ವಾಮಿ ಅವರ ಜೊತೆ ಮಾತನಾಡಿದ್ದೇನೆ. ನಮಗೆ ಈ ಜಿಲ್ಲೆಯ ಹಿತವೇ ಮುಖ್ಯ ಎಂದು ಪ್ರತಿಪಾದಿಸಿದರು.
ಜಿಲ್ಲೆಯಲ್ಲಿ ವಿಪಕ್ಷಗಳ ದನಿ ಕುಗ್ಗಿಲ್ಲ, ಕಂದಾಯ, ಪೊಲೀಸ್ ಹಾಗೂ ಜಿಪಂ ಒಂದು ಪಕ್ಷದ ಕಚೇರಿ ಆಗಬಾರದು, ಪೊಲೀಸ್ ಇಲಾಖೆ ಅಡಿಯಲ್ಲಿ ದಂಧೆ ನಡೆಯುತ್ತಿದೆ. ಹೇಳೋರು, ಕೇಳೋರು ಇಲ್ಲ ಎಂದು ದೂರಿದರು.
ಜಿಪಂ ಕಾಂಗ್ರೆಸ್ ಕಚೇರಿಯಾಗಿದೆ. 15ನೇ ಹಣಕಾಸು ಯೋಜನೆ ಹಣ ಹಂಚಲು ತಾರತಮ್ಯ ಮಾಡುತ್ತಿದ್ದಾರೆ. ಸೀಗೆಗುಡ್ಡದಲ್ಲಿ ಅಕ್ರಮವಾಗಿ ನೂತನ ಬಡಾವಣೆ ಕಾಮಗಾರಿ ನಡೆಯುತ್ತಿದ್ದರೂ, ಡಿಸಿ ಮೊದಲಾದವರು ಏನೂ ನಡೆಯುತ್ತಿಲ್ಲ ಎಂದು ವರದಿ ಕೊಡುತ್ತಾರೆ ಎಂದ ಏನು ಹೇಳಲಿ ಎಂದು ವಿಷಾದಿಸಿದರು.
ಹಾಗೆಯೇ ಚಿಕ್ಕಕೊಂಡಗೊಳ ಬಳಿ ಹೀಗೆ ಸುಮಾರು 100 ಎಕರೆ ಪ್ರದೇಶದಲ್ಲಿ ಹೊಸ ಲೇಔಟ್ ನಡೆಯುತ್ತಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಸರ್ಕಾರದಲ್ಲಿ ಹಣ ಇಲ್ಲ ಎನ್ನುವ ಸಚಿವ ಕೃಷ್ಣ ಬೈರೇಗೌಡರು, ಅಕ್ರಮಕ್ಕೆ ಕಡಿವಾಣ ಹಾಕಿ, ಅಷ್ಟೂ ಹಣವನ್ನು ಸರ್ಕಾರಕ್ಕೆ ಉಳಿಸಲಿ ಎಂದು ಸಲಹೆ ನೀಡಿದರು. ಹಾಲಿ ತಪ್ಪು ಮಾಡುತ್ತಿರುವ ಅಧಿಕಾರಿಗಳು ಯಾರೂ ನನ್ನ ಕೈಗೆ ಸಿಗಲ್ವಾ, ಮುಂದೆ ನೋಡಿಕೊಳ್ಳುವೆ ಎಂದು ಸವಾಲು ಹಾಕಿದರು.
ದೇವೇಗೌಡರ ಕುಟುಂಬ ಮುಗಿದೇ ಹೋಯ್ತು ಅಂದು ಕೊಂಡಿದ್ದಾರೆ. ಆದರೀಗ ಆರಂಭ ಆಗಿದೆ, ದೇಶದ ರಾಜಕೀಯ ಗೊತ್ತಿದೆ ಎಂದರು. ಈ ಜಿಲ್ಲೆಗೆ ಇನ್ನೇನು ಏನೇನು ಮಾಡಬೇಕೋ ಅದು ಮಾಡಿಯೇ ರಾಜಕೀಯ ನಿವೃತ್ತಿ ಪಡೆಯುವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಶಾಸಕ ಹೆಚ್.ಪಿ. ಸ್ವರೂಪ ಪ್ರಕಾಶ್, ನಗರಸಭೆ ಅಧ್ಯಕ್ಷ ಎಂ.ಚAದ್ರೇಗೌಡ ಇದ್ದರು.
ಹಿಂದೆ ಹೈಟೆಕ್ ಬಸ್ ನಿಲ್ದಾಣ, ಫ್ಲೈಓವರ್ ಓವರ್ ಮಾಡಿಸಿದ್ದು ಯಾರು? ವಿಮಾನ ನಿಲ್ದಾಣ ಮೂಲ ಯೋಜನೆಯನ್ನು ಬದಲು ಮಾಡಲಾಗಿದೆ. ಅದನ್ನು ಮೂಲ ಯೋಜನೆಯಂತೆಯೇ ಮಾದರಿ ಮಾಡಬೇಕು. ಜಿಲ್ಲೆಯ ಬಹುವರ್ಷಗಳ ಬೇಡಿಕೆ ಆಗಿರುವ ಐಐಟಿ ತರುವ ನಿಟ್ಟಿನಲ್ಲಿ ಹೋರಾಟ ಮುಂದುವರಿಯಲಿದೆ ಜಿಲ್ಲೆಗೆ ಐಐಟಿ ತಪ್ಪಲು ಕಾಂಗ್ರೆಸ್ ಕಾರಣ. ಸೋಲು ಗೆಲುವು ಸಹಜ, ಜೆಡಿಎಸ್-ಬಿಜೆಪಿ ಶಾಸಕರು ಕುಳಿತು ಚರ್ಚಿಸುತ್ತೇವೆ. ಅಗತ್ಯ ಬಿದ್ದರೆ ಅರಸೀಕೆರೆ ಶಾಸಕರೂ ನಮ್ಮೊಂದಿಗೆ ಕೈಜೋಡಿಸಲಿ, ನಮಗೆ ಅಭಿವೃದ್ಧಿ ಮುಖ್ಯ.
-ಎಚ್.ಡಿ.ರೇವಣ್ಣ