ಹಾಸನದಲ್ಲಿ ಕ್ರೈಂ ರೇಟ್ ಜಾಸ್ತಿ ಆಗಿದೆ, ಎಸ್ಪಿ ಕಾಂಗ್ರೆಸ್ ಏಜೆಂಟ್, ಎಎಸ್ಪಿ ಕಳ್ಳರ ಗ್ಯಾಂಗ್ ಮುಖ್ಯಸ್ಥನಂತೆ ವರ್ತಿಸ್ತಾರೆ: ಪೊಲೀಸ್ ಇಲಾಖೆ ವಿರುದ್ಧ ಎಚ್.ಡಿ.ರೇವಣ್ಣ ಟೀಕಾ ಪ್ರಹಾರ

ತಲೆ ಬುರುಡೆಗೆ ಹೊಡೆದವರ ಮೇಲೂ ಕೇಸ್, ಹೊಡೆಸಿಕೊಂಡವನ ಮೇಲೂ ಕೇಸ್ ಮಾಡ್ತಿದ್ದಾರೆ. ನಾನು ಉಳಿದುಕೊಳ್ತೇನೆ ಎಂದು ಅಂದುಕೊಂಡಿದ್ದರೆ ಅದು ಕನಸು. ಎಸ್ಪಿ ಅವರಿಗೆ ಧಿಮಾಕು ಇದ್ದರೆ ಬಿಡಬೇಕು, ನಿಮ್ಮ ಧಿಮಾಕು ನಮ್ಮ ಬಳಿ ನಡೆಯಲ್ಲ.ನಾಳೆ ಏನಾದರೂ ಹೆಚ್ಚು ಕಡಿಮೆ ಆದರೆ ಎಸ್ಪಿನೇ ನೇರ ಹೊಣೆ. ಎ‌ಎಸ್‌ಪಿ ಇನ್ನೂ ನಾಲ್ಕು ತಿಂಗಳಿದೆ ಹಾಗಾಗಿ ಅವನನ್ನು ಕರೆದುಕೊಂಡು ಬಂದಿದ್ದಾರೆ.ಎಎಸ್‌ಪಿ ಕಳ್ಳರ ಗ್ಯಾಂಗ್ ಇಟ್ಟುಕೊಂಡವನಂತೆ ಎಂದು ವಾಗ್ದಾಳಿ ನಡೆಸಿದರು.

ಹಾಸನ: ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕ್ರೈಂ ದರ ಗಣನೀಯವಾಗಿ ಏರಿಕೆಯಾಗಿದೆ. ಪೊಲೀಸ್ ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ಶಾಸಕರು ಹಾಗೂ ಮಾಜಿ ಶಾಸಕರು ಆರೋಪಿಸಿದ್ದಾರೆ.

ಶಾಸಕರಾದ ಎಚ್.ಡಿ. ರೇವಣ್ಣ, ಸ್ವರೂಪ್‌ಪ್ರಕಾಶ್, ಸಿ.ಎನ್. ಬಾಲಕೃಷ್ಣ ಹಾಗೂ ಮಾಜಿ ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಕೆ.ಎಸ್. ಲಿಂಗೇಶ್ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಇಲಾಖೆಯ ವೈಫಲ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಮಾಜಿ ಸಚಿವ ಎಚ್.ಡಿ. ರೇವಣ್ಣ, “ಹಾಸನ ಜಿಲ್ಲೆಯಲ್ಲಿ ಪೊಲೀಸ್ ಆಡಳಿತ ಸಂಪೂರ್ಣ ಕುಸಿದಿದೆ. ಹಾಡುಹಗಲೇ ಕೊಲೆ, ಕಳ್ಳತನ, ಮನೆಗೆ ನುಗ್ಗಿ ಹಲ್ಲೆ, ಜೂಜು, ಕ್ಲಬ್‌ಗಳಲ್ಲಿ ದಂಧೆ, ಮಾಮೂಲಿ ವಸೂಲಿ ನಡೆಯುತ್ತಿದೆ. ದೂರು ನೀಡಲು ಹೋದರೆ ತೆಗೆದುಕೊಳ್ಳುವುದಿಲ್ಲ. ಜಿಲ್ಲೆಯಲ್ಲಿ ಕಾನೂನುಬಾಹಿರವಾಗಿ ಸುಳ್ಳು ಕೇಸ್‌ಗಳನ್ನು ಹಾಕಿ, ನಮ್ಮ ಕಾರ್ಯಕರ್ತರ ಮೇಲೆ ರೌಡಿಶೀಟ್ ತೆರೆಯುವುದಾಗಿ ಬೆದರಿಕೆ ಹಾಕಲಾಗುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕಾಂಗ್ರೆಸ್ ಏಜೆಂಟ್‌ನಂತೆ ಕೆಲಸ ಮಾಡುತ್ತಿರುವ ಎಸ್‌ಪಿ ಹಾಗೂ ಎಎಸ್‌ಪಿ ವೆಂಕಟೇಶ್ ನಾಯ್ಡು ಕಳ್ಳರ ಗ್ಯಾಂಗ್‌ಗೆ ಮುಖ್ಯಸ್ಥರಂತೆ ವರ್ತಿಸುತ್ತಿದ್ದಾರೆ. ಇವರ ವರ್ತನೆಯಿಂದ ಪೊಲೀಸರೇ ಬೇಸತ್ತಿದ್ದಾರೆ,” ಎಂದು ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ. “ಬೆಂಗಳೂರಿನಲ್ಲಿ ಪ್ರಾಮಾಣಿಕ ಅಧಿಕಾರಿ ದಯಾನಂದ ಅವರಂತವರು ಬಲಿಯಾದರು. ಇದೇ ರೀತಿ ಈ ಅಧಿಕಾರಿಗಳು ಬಲಿಯಾಗಲಿದ್ದಾರೆ,” ಎಂದು ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ಮೊಬೈಲ್ ಕಳ್ಳತನ, ಸರಗಳ್ಳತನ, ಚಿನ್ನಾಭರಣ ವಸೂಲಿಯಂತಹ ಘಟನೆಗಳು ಹೆಚ್ಚಾಗಿವೆ ಎಂದು ಆರೋಪಿಸಿರುವ ರೇವಣ್ಣ, “ಎಸ್‌ಪಿ ಒಂದು ಫೋನ್ ಕಾಲ್‌ನಲ್ಲಿ ಎಲ್ಲವನ್ನೂ ಮಾಡಿಸುತ್ತಾರೆ. ದಂಧೆಕೋರರಿಗೆ ಪೊಲೀಸರಿಂದ ಪೂರ್ಣ ಸಹಕಾರವಿದೆ,” ಎಂದಿದ್ದಾರೆ. “ಕಾಂಗ್ರೆಸ್ ಯಾವಾಗಲೂ ಅಧಿಕಾರದಲ್ಲಿರುವುದಿಲ್ಲ. ಒಂದು ವಾರದೊಳಗೆ ಶಾಂತಿಯುತ ಪ್ರತಿಭಟನೆ ನಡೆಸಿ, ಈ ಎಲ್ಲ ಘಟನಾವಳಿಗಳನ್ನು ಜನತೆಯ ಮುಂದೆ ಬಿಚ್ಚಿಡುತ್ತೇವೆ,” ಎಂದು ಘೋಷಿಸಿದ್ದಾರೆ

“ನಾನು 30 ವರ್ಷ ಶಾಸಕನಾಗಿದ್ದೇನೆ. ಯಾವತ್ತಾದರೂ ಪೊಲೀಸರಿಗೆ ತೊಂದರೆ ಕೊಟ್ಟಿದ್ದೇನೆಯೇ ಎಂದು ಕೇಳಿ. ಜೆಡಿಎಸ್ ಮುಗಿದು ಹೋಯಿತು ಎಂದು ಭಾವಿಸಿದವರ ಭ್ರಮೆಯನ್ನು ಜನತೆಯೇ ತೆಗೆಯುತ್ತಾರೆ,” ಎಂದು ರೇವಣ್ಣ ಸವಾಲು ಹಾಕಿದ್ದಾರೆ. ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಎಸ್‌ಪಿಯೇ ಎಲ್ಲ ಘಟನೆಗಳಿಗೆ ನೇರ ಹೊಣೆಯಾಗುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಶಾಂತಿ ಕೆಡಬಾರದು ಎಂದು ನಮಗೆ ಎಷ್ಟೇ ನೋವಿದ್ದರೂ, ನಮ್ಮ ಕಾರ್ಯಕರ್ತರ ಮೇಲೆ‌ ಕೇಸ್ ಹಾಕಿದ್ರು ನೋವು ಸಹಿಸಿಕೊಂಡಿದ್ದೇವೆ .ಈ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಹಾಡುಹಗಲೇ ಮರ್ಡರ್‌ಗಳಾಗುತ್ತಿವೆ. ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು.

ಪೊಲೀಸರು ಜನರು ದೂರು ನೀಡಲು ಹೋದರೆ ತೆಗೆದುಕೊಳ್ಳುವುದಿಲ್ಲ. ದುಷ್ಕರ್ಮಿಗಳು ಮನೆಗೆ ನುಗ್ಗಿ ಹಲ್ಲೆ ಮಾಡುತ್ತಿದ್ದಾರೆ. ಮನೆ ಮನೆಯೊಳಗೆ ಜೂಜಾಡಿಸುತ್ತಿದ್ದಾರೆ. ಕ್ಲಬ್‌ಗಳು, ಇಸ್ಪಿಟ್ ದಂಧೆ, ಬಾರ್‌ಗಳಿಂದ ಮಾಮೂಲಿ ಪಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಯಾವಾಗ ಬೇಕಾದರೂ ಎಣ್ಣೆ ಸಿಗುತ್ತದೆ.
ಅಮಾಯಕರ ಮೇಲೆ ಕಾನೂನುಬಾಹಿರವಾಗಿ ಸುಳ್ಳು ಕೇಸ್ ಹಾಕ್ತಿದ್ದಾರೆ.‌ನಮ್ಮ ಕಾರ್ಯಕರ್ತರ ಮೇಲೆ ರೌಡಿಶೀಟರ್ ಓಪನ್ ಮಾಡ್ತಿನಿ ಅಂತ ಹೆದರಿಸುತ್ತಿದ್ದಾರೆ. ರೌಡಿ ಎಲಿಮೆಂಟ್ಸ್‌ನ ಯಾರೂ ತಡೆಯುತ್ತಿಲ್ಲ ಎಂದು ಆರೋಪಿಸಿದರು.

ಯಾವ ಊರಿಗೆ ಹೋದರೂ ಗಲಾಟೆ, ದುಡ್ಡಿಗಾಗಿ ಹೊಡೆದಾಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮೊಬೈಲ್ ಕಳ್ಳತನ, ಸರಗಳ್ಳತನ ಜಾಸ್ತಿಯಾಗಿದೆ.‌ಚೈನ್ ಕಳ್ಳತನ ಹಿಡಿದಿದ್ದೇವೆ ಎಂದು ಮಾರ್ವಾಡಿಗಳ ಬಳಿ ಪೊಲೀಸರೇ ಚಿನ್ನಾಭರಣ ವಸೂಲಿ ಮಾಡುತ್ತಿದ್ದಾರೆ.ಪೊಲೀಸ್ ಅಧಿಕಾರಿಗಳು ಒಂದು ಪಕ್ಷದ ಏಜೆಂಟ್ ಆಗಿ ಕೆಲಸ ಮಾಡಬೇಡಿ ಎಂದು ಕಿಡಿಕಾರಿದರು.

ತಲೆ ಬುರುಡೆಗೆ ಹೊಡೆದವರ ಮೇಲೂ ಕೇಸ್, ಹೊಡೆಸಿಕೊಂಡವನ ಮೇಲೂ ಕೇಸ್ ಮಾಡ್ತಿದ್ದಾರೆ.
ನಾನು ಉಳಿದುಕೊಳ್ತೇನೆ ಎಂದು ಅಂದುಕೊಂಡಿದ್ದರೆ ಅದು ಕನಸು. ಎಸ್ಪಿ ಅವರಿಗೆ ಧಿಮಾಕು ಇದ್ದರೆ ಬಿಡಬೇಕು, ನಿಮ್ಮ ಧಿಮಾಕು ನಮ್ಮ ಬಳಿ ನಡೆಯಲ್ಲ.ನಾಳೆ ಏನಾದರೂ ಹೆಚ್ಚು ಕಡಿಮೆ ಆದರೆ ಎಸ್ಪಿನೇ ನೇರ ಹೊಣೆ. ಎ‌ಎಸ್‌ಪಿ ಇನ್ನೂ ನಾಲ್ಕು ತಿಂಗಳಿದೆ ಹಾಗಾಗಿ ಅವನನ್ನು ಕರೆದುಕೊಂಡು ಬಂದಿದ್ದಾರೆ.ಎಎಸ್‌ಪಿ ಕಳ್ಳರ ಗ್ಯಾಂಗ್ ಇಟ್ಟುಕೊಂಡವನಂತೆ ಎಂದು ವಾಗ್ದಾಳಿ ನಡೆಸಿದರು