ಹಾಸನ(HASSAN): ಪ್ರಿಯಕರನಿಗೆ ಚಾಕು ಇರಿತ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಆರೋಪಿ ಭವಾನಿ ಪೊಲೀಸರಿಗೆ ಮೆಸೇಜ್ ಮಾಡಿರುವ ಸ್ಕ್ರೀನ್ ಶಾಟ್ ವೈರಲ್ ಆಗಿದೆ.
ಮನುಕುಮಾರ್‌ಗೂ ನನಗೂ ಮದುವೆ ಆಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇಬ್ಬರೂ ನೋಂದಣಿ ಮಾಡಿಸಿಕೊಂಡಿದ್ದೇವೆ ಎಂದು ಮದುವೆ ನೋಂದಣಿ ಪ್ರಮಾಣಪತ್ರವೊಂದನ್ನು ಭವಾನಿ ಪೊಲೀಸರಿಗೆ ಕಳುಹಿಸಿದ್ದು, 2023ರ ನ.10 ರಂದು ಅವರಿಬ್ಬರ ಮದುವೆ ನೋಂದಣಿ ಆಗಿರುವ ಮಾಹಿತಿ ಅದರಲ್ಲಿದೆ.
ಆತ ನನ್ನೊಂದಿಗೆ ಮದುವೆ ಆಗಿ ತುಂಬಾ ಜನರ ಜೊತೆ ಅಫೇರ್ ಇಟ್ಟುಕೊಂಡಿದ್ದ. ಹೊಸ ವರ್ಷದ ಪಾರ್ಟಿಗೂ ಬೇರೆ ಹುಡುಗಿ ಕರೆದುಕೊಂಡು ಹೋಗಿದ್ದ. ಅದು ಗೊತ್ತಾಗಿಯೇ ನಾನು ಅಲ್ಲಿಗೆ ಹೋಗಿ ಜಗಳ ಮಾಡಿದೆ. ಈ ವಿಚಾರದಲ್ಲಿ ಅವರ ಮನೆಯ ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ. ನನಗೆ ನ್ಯಾಯಕೊಡಿಸಿ ಎಂದು ಮನವಿ ಮಾಡಿರುವ ಭವಾನಿ ಕಳುಹಿಸಿರುವ ವಾಟ್ಸಪ್ ಮೆಸೇಜ್ ಗಳ ಸ್ಕ್ರೀನ್ ಶಾಟ್ ವೈರಲ್ ಆಗಿದೆ.