ಹಾಸನ: ಬೇಲೂರಿನಲ್ಲಿ ಪೆಟ್ರೋಲ್ ಪಂಪ್‌ಗೆ ನುಗ್ಗಿ ಬಾಂಗ್ಲಾ ಮೂಲದ ನುಸುಳುಕೋರರು ಕೊಲೆ ಮಾಡಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೋ ಮಾಹಿತಿ ಅಸಲಿಯತ್ತಿನ ಫ್ಯಾಕ್ಟ್ ಚೆಕ್ ಮಾಡಿರುವ ಜಿಲ್ಲಾ ಪೊಲೀಸರು ಅದೊಂದು ಫೇಕ್ ನ್ಯೂಸ್ ಎನ್ನುವುದನ್ನು ಖಚಿತಪಡಿಸಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ಫೇಸ್ ಬುಕ್ ಅಕೌಂಟ್‌ನಲ್ಲಿ ವರದಿ ಪ್ರಕಟಿಸಿದ್ದಾರೆ. ಅದು ಇಂತಿದೆ:
Fact check : ಅಕ್ರಮವಾಗಿ ದೇಶದ ಒಳಗೆ ಬಂದಿರುವ ಬಾಂಗ್ಲಾದೇಶಿ (ಅಸ್ಸಾಮಿಗರು ಎಂದು ಹೇಳುವವರು) ವ್ಯಕ್ತಿಯು ಬೇಲೂರು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತಿದ್ದ ವ್ಯಕ್ತಿಯನ್ನು ಕೊಲೆ ಮಾಡಿ ಪರಾರಿ ಆಗಿದ್ದಾನೆ ಎಂದು ಕೆಲವು ನ್ಯೂಸ್ ಚಾನೆಲ್ ಹಾಗೂ ಫೇಸ್ಬುಕ್ ಖಾತೆಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು.
ನಿಜಾಂಶ: ಈ ಘಟನೆಯ ಕುರಿತು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆಟ್ರೋಲ್ ಬಂಕಿನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿಗಳು ಕೇರಳ ಮೂಲದವರೆಂದು ಹಾಗೂ ಇವರು ಬೇಲೂರಿನಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದವರೆಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ ಹಾಗೂ ಆರೋಪಿತರ ಮೇಲೆ IPC 307 ಅಡಿಯಲ್ಲಿ ಕೇಸ್ ದಾಖಲಿಸಲಾಗಿದ್ದು,ಆರೋಪಿತರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯು ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.