ಹಾಸನ: ಅಪರಿಚಿತ ವಾಹನ ಡಿಕ್ಕಿ ಪಾದಚಾರಿ ಸಾವು| ಮೃತದೇಹ ಛಿದ್ರ ಛಿದ್ರ!

ಹಾಸನ(HASSAN): ಸಕಲೇಶಪುರ ಹೊರವಲಯದ ಬೈಪಾಸ್‌ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಪಾದಚಾರಿ ಮಂಜುನಾಥ್ (ಗುಂಡ) (46) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಂಜುನಾಥ್ ಕೌಡಳ್ಳಿ ಗ್ರಾಮದ ನಿವಾಸಿಯಾಗಿದ್ದು, ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದು ಮೃತಪಟ್ಟ ಅವರ ಮೇಲೆ ಬೇರೆ ವಾಹನಗಳೂ ಹರಿದಿದ್ದು ಮೃತನ ದೇಹ ಸಂಪೂರ್ಣ ನಜ್ಜುಗುಜ್ಜಾಗಿ, ದೇಹದ ಭಾಗಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಅಪಘಾತಕ್ಕೆ ಕಾರಣವಾದ ವಾಹಾನವನ್ನು ಪತ್ತೆಹಚ್ಚಲು ಯತ್ನ ಆರಂಭಿಸಿದ್ದಾರೆ‌ ಮುಂದುವರಿಸಿದೆ. ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.