ಬೂವನಹಳ್ಳಿ ಪಿಕೆಪಿಸಿಎಸ್ ಅಧ್ಯಕ್ಷರಾಗಿ ಬಿ.ಆರ್. ಬೊಮ್ಮೇಗೌಡ ಆಯ್ಕೆ

ಹಾಸನ: ಭಾರಿ ಕುತೂಹಲ ಮೂಡಿಸಿದ್ದ ಬೂವನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ಆರ್. ಬೊಮ್ಮೇ ಗೌಡ  ಆಯ್ಕೆಯಾದರು.

11 ಸದಸ್ಯ ಬಲದ ಸಂಘದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ. ಆರ್. ಬೊಮ್ಮೇಗೌಡ ಹಾಗೂ ಗಣೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಇಂದ್ರಮ್ಮ ಹಾಗೂ ವಿಜಯಲಕ್ಷ್ಮಿ ನಾಮಪತ್ರ ಸಲ್ಲಿಸಿದರು.

ಮಧ್ಯಾಹ್ನ 12 ಗಂಟೆಗೆ ನಡೆದ ಚುನಾವಣೆಯಲ್ಲಿ ಬಿ.ಆರ್. ಬೊಮ್ಮೇಗೌಡ ಹಾಗೂ ವಿಜಯಲಕ್ಷ್ಮಿ ಅವರು ತಲಾ ಆರು ಮತಗಳನ್ನು ಪಡೆದು ಆಯ್ಕೆಯಾದರು.

ಆಯ್ಕೆ ನಂತರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬೊಮ್ಮೇಗೌಡ, ಚುನಾವಣೆಯೊಂದಿಗೆ ನಮ್ಮ ನಡುವಿನ ಪೈಪೋಟಿಯೂ ಮುಕ್ತಾಯವಾಗಿದೆ ಇನ್ನು ಮುಂದೆ ನಾವೆಲ್ಲರೂ ಒಗ್ಗೂಡಿ ಸಂಘದ ಅಭಿವೃದ್ಧಿಗೆ ಶ್ರಮಿಸೋಣ. ಈ ನಿಟ್ಟಿನಲ್ಲಿ ನಾನು ಎಲ್ಲಾ ನಿರ್ದೇಶಕರ ಸಹಕಾರ ಬಯಸುತ್ತೇನೆ ಎಂದರು.

ಬೊಮ್ಮೇಗೌಡ ಅವರು ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.