ಅರಸೀಕೆರೆಯಲ್ಲಿ ವರುಣಾರ್ಭಟ; ವಿದ್ಯುತ್ ಇಲ್ಲದೆ ಜನರ ಪರದಾಟ

ಹಾಸನ:  ನಿನ್ನೆ ರಾತ್ರಿ ಸುರಿದ ಭಾರಿ ಮಳೆ-ಗಾಳಿ ಯ ಆರ್ಭಟಕ್ಕೆ ಅರಸೀಕೆರೆ ನಗರದಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಅರಸೀಕೆರೆಯಲ್ಲಿ ತೆಂಗಿನ‌ಮರ ನೆಲಕ್ಕುರುಳಿದ್ದು, ಅದರ ಪರಿಣಾಮವಾಗಿ ಟ್ರಾನ್ಸ್‌ಫಾರ್ಮರ್ಸ್‌ ಕಂಬ ಮುರಿದು‌ ಬಿದ್ದಿದೆ. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.

ರಸ್ತೆಗೆ ಅಡ್ಡಲಾಗಿ ತೆಂಗಿನ ಮರ ಬೀಳುತ್ತಿದ್ದಂತೆ ತುಂಡಾಗಿ ರಸ್ತೆ ಮೇಲೆ
ವಿದ್ಯುತ್ ತಂತಿಗಳು ಬಿದ್ದವು. ಅದೃಷ್ಟವಶಾತ್ ಅಲ್ಲಿ ಯಾರೂ ಇಲ್ಲದ್ದರಿಂದ ಅಪಾಯವಾಗಲಿಲ್ಲ.

ನಗರದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಟ್ರಾನ್ಸ್‌ಫಾರ್ಮರ್, ತುಂಡಾದ ವಿದ್ಯುತ್ ವೈರ್‌ಗಳು ರಸ್ತೆಗೆ ವಾಲಿವೆ. ರಾತ್ರಿಯಿಂದ ವಿದ್ಯುತ್ ಇಲ್ಲದೆ ನಿವಾಸಿಗಳ ಪರದಾಡುತ್ತಿದ್ದು ಸೆಸ್ಕ್ ಸಿಬ್ಬಂದಿ ದುರಸ್ತಿ ಕಾರ್ಯ ಆರಂಭಿಸಿದ್ದಾರೆ.