HASSAN:ಕಾಡಾನೆ-ಮಾನವ ಸಂಘರ್ಷ ತಡೆಗೆ ಜೀವ‌ ಪಣಕ್ಕಿಟ್ಟು ದುಡಿಯುತ್ತಿರುವ ಹೊರಗುತ್ತಿಗೆ ಅರಣ್ಯ ಸಿಬ್ಬಂದಿ ಮುಷ್ಕರ: ಮಲೆನಾಡಿನಲ್ಲಿ ಆತಂಕ

HASSAN ಹಾಸನ: ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರು ತಮ್ಮ ಹಕ್ಕುಗಳನ್ನು ಒತ್ತಾಯಿಸುತ್ತಾ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ವೇತನ ಮತ್ತು ಸೌಲಭ್ಯಗಳ ಕೊರತೆಯಿಂದ ಬೇಸರಗೊಂಡಿರುವ ಎಲಿಫಂಟ್ ಟಾಸ್ಕ್ ಫೋರ್ಸ್ (ETF), ರಾಪಿಡ್ ರೆಸ್ಪೋನ್ಸ್ ಟೀಮ್ (RRT) ಹಾಗೂ ಅರಣ್ಯ ಸಂರಕ್ಷಣಾ ಸಿಬ್ಬಂದಿ (ADC) ಕೆಲಸ ಬಹಿಷ್ಕರಿಸಿದ್ದಾರೆ. ಇದರಿಂದ ಕಾಡಾನೆಗಳ ಚಲನವಲನದ ಮಾಹಿತಿ ಘೋಷಣೆ, ಟ್ರ್ಯಾಕಿಂಗ್, ಜಿಪಿಎಸ್ ಅಪ್‌ಡೇಟ್ ಸೇರಿದಂತೆ ಹಲವಾರು ಕಾರ್ಯಗಳು ಸ್ಥಗಿತಗೊಂಡಿವೆ.

ಮಲೆನಾಡು ಭಾಗಗಳಲ್ಲಿ ಕಾಡಾನೆ ಹಾವಳಿ ಮಿತಿ ಮೀರಿ ಸಮಸ್ಯೆ ಉಂಟುಮಾಡಿದೆ. ಗ್ರಾಮಸ್ಥರು ಪ್ರತಿದಿನವೂ ಕಾಡಾನೆಗಳ ಆತಂಕದಲ್ಲಿ ಬದುಕುತ್ತಿದ್ದಾರೆ. ಈ ಸಂದರ್ಭದಲ್ಲಿಯೇ, ಜನರ ಜೀವರಕ್ಷಣೆಗೆ ಸ್ಪಂದಿಸುತ್ತಿದ್ದ ಈ ನೌಕರರು ಮುಷ್ಕರಕ್ಕಿಳಿದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

ಹಾಸನ, ಅಲೂರು, ಸಕಲೇಶಪುರ, ಅರಕಲಗೂಡು ಸೇರಿ ಅನೇಕ ಪ್ರದೇಶಗಳಲ್ಲಿ ಈ ಮುಷ್ಕರದ ಪರಿಣಾಮ ಜನರಲ್ಲಿ ಆತಂಕ ಹೆಚ್ಚಿಸಿದೆ. ಸರ್ಕಾರ ಈ ಸಮಸ್ಯೆಯನ್ನು ತಕ್ಷಣವೇ ಗಮನಿಸಿ, ನೌಕರರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂಬುದು ಸಾರ್ವಜನಿಕರ ಹಾಗೂ ನೌಕರರ ಆಗ್ರಹವಾಗಿದೆ.