ಹಾಸನಾಂಬ ದೇವಾಲಯದಲ್ಲಿ ಅವಗಣನೆ ಆರೋಪ; ಐಡಿ ಕಾರ್ಡ್ ಹಿಂದಿರುಗಿಸಿ ಪೌರ ಕಾರ್ಮಿಕರ ಪ್ರತಿಭಟನೆ

ಹಾಸನ: ಹಾಸನಂಬಾ ಉತ್ಸವದಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಪೌರ ಕಾರ್ಮಿಕರನ್ನು ತುಚ್ಚವಾಗಿ ಕಾಣಲಾಗುತ್ತಿದೆ ಎಂದು ಆರೋಪಿಸಿ ತಮಗೆ ನೀಡಲಾಗಿದ್ದ ಐಡಿ ಕಾರ್ಡ್ ಗಳನ್ನು ವಾಪಸ್ ನೀಡಿ ನಗರಸಭೆ ಎದುರು ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು.

ಈ ವೇಳೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಯೋಗೀಶ್ ಮಾತನಾಡಿ ನಗರಸಭೆ ಪೌರಕಾರ್ಮಿಕರು ಹಾಗೂ ಅಧಿಕಾರಿಗಳನ್ನು ಹಾಸನಂಬೋತ್ಸವಕ್ಕೆ ನಿಯೋಜಿಸಿರುವ ಅಧಿಕಾರಿಗಳು ಕಡೆಗಣಿಸಿದ್ದಾರೆ, ತಮ್ಮ ಕರ್ತವ್ಯ ನಿರ್ವಹಿಸಲು ಕೂಡ ಯಾವುದೇ ಸ್ವಾತಂತ್ರ್ಯ ಇಲ್ಲ, ದೇವಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಊಟ ಉಪಚಾರಕ್ಕು ಇಲ್ಲದ ಕಾನೂನುಗಳನ್ನು ಮಾಡಿ ಹಿಂಸಿಸುತ್ತಿದ್ದಾರೆ ಎಂದು ತಮ್ಮ ಅಳಲು ತೊಳೆದುಕೊಂಡು ಹಾಸನಾಂಬ ದೇವಿಯ ದರ್ಶನಕ್ಕಾಗಿ ಪೌರಕಾರ್ಮಿಕರು ಕೂಡ ಹಗಲು ಸಮವಹಿಸುತ್ತಿದ್ದು ತಮಗೆ ಬೇಕಾದ ಸಮಯಕ್ಕೆ ಜಿಲ್ಲಾಡಳಿತ ನಮ್ಮನ್ನು ಎಲ್ಲಾ ಸ್ವಚ್ಚತಾ ಕಾರ್ಯಗಳಲ್ಲಿ ಬಳಸಿಕೊಂಡು ಉತ್ಸವದಲ್ಲಿ ಮಾತ್ರ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಆರೋಗ್ಯಾಧಿಕಾರಿ ಪ್ರಸಾದ್ ಮಾತನಾಡಿ, ನಗರಸಭೆ ಸದಸ್ಯರೋಬ್ಬರು ದೇವಿಯ ದರ್ಶನಕ್ಕೆ ಆಗಮಿಸಿದಾಗ ಅವರನ್ನು ಇಲ್ಲದ ಪ್ರಶ್ನೆಗಳನ್ನು ಕೇಳಿ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ.

ನಂತರ ನನ್ನನ್ನು ಕೂಡ ದೇವಾಲಯದ ಒಳ ಬಿಡದೆ ಐಡಿ ಕಾರ್ಡ್ ಕಿತ್ತುಕೊಂಡು ನಿಮ್ಮ ಅವಶ್ಯಕತೆ ಇಲ್ಲ ಎಂದು ಹೊರಗೆ ಕಳಿಸಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಿ ನಿಜವಾದ ಶ್ರಮಿಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಮನವಿ ಮಾಡಿದರು