ಹಸೀನಾ ಕೃತಿಗೆ ‘ಇಂಗ್ಲಿಷ್ ಪೆನ್’; ಲೇಖಕಿ ಬಾನು ಮುಷ್ತಾಕ್ ಗೆ ಕನ್ನಡ ಸಾಹಿತ್ಯ ಪರಿಷತ್ ನಿಂದ ಅಭಿನಂದನೆ

ಹಾಸನ: ಹಸೀನಾ ಮತ್ತು ಇತರ ಕತೆಗಳು ಪುಸ್ತಕ ಆಂಗ್ಲ ಭಾವಾನುವಾದಿತ ಕೃತಿ ಪ್ರತಿಷ್ಠಿತ ‘ಇಂಗ್ಲಿಷ್ ಪೆನ್’ ಪ್ರಶಸ್ತಿ ಪುರಸ್ಕೃತವಾದ ಹಿನ್ನೆಲೆಯಲ್ಲಿ ಕೃತಿಯ ಮೂಲ ಕತೃ ನಾಡಿನ ಹಿರಿಯ ಸಾಹಿತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾರ್ಗದರ್ಶಿ ಸಮಿತಿ ಸದಸ್ಯೆ ಬಾನು ಮುಷ್ತಾಕ್ ಅವರನ್ನು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಭಿನಂದಿಸಲಾಯಿತು.

ಬಾನು ಮುಷ್ತಾಕ್ ಅವರ ನಿವಾಸಕ್ಕೆ ತೆರಳಿದ ಕಸಾಪ ಪ್ರತಿನಿಧಿಗಳು ಹಾರ ಹಾಕಿ, ಶಾಲು ಹೊದಿಸಿ ಅಭಿನಂದಿಸಿದರು.

ಈ ವೇಳೆ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ, ಮಾಜಿ ಅಧ್ಯಕ್ಷ ಎಚ್.ಬಿ ಮದನಗೌಡ, ಮಾರ್ಗದರ್ಶಿ ಸಮಿತಿ ಸದಸ್ಯ ಹಂಪನಹಳ್ಳಿ ತಿಮ್ಮೇಗೌಡ, ಜೆ.ಆರ್.ಕೆಂಚೇಗೌಡ, ಗೌರವ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ,ಸಂಘಟನಾ ಕಾರ್ಯದರ್ಶಿ ಆರ್.ಬಿ ಶಂಕರ್, ಪದಾಧಿಕಾರಿಗಳಾದ ಕಮಲಮ್ಮ, ವನಜಾ ಸುರೇಶ್, ಬನುಮ ಗುರುದತ್ ಇತರರು ಇದ್ದರು.