ಹಾಸನಾಂಬ ದೇವಾಲಯದ ಹುಂಡಿ ಕಾಣಿಕೆ ಎಣಿಕೆ ಪೂರ್ಣ; ಹತ್ತು ದಿನದ ಉತ್ಸವದಲ್ಲಿ 12.63 ಕೋಟಿ ರೂ. ದಾಖಲೆ ಆದಾಯ!

ಹಾಸನ:(kannadapost.in) ಹಾಸನಾಂಬೆ ದೇವಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು ಈ ಬಾರಿಯ ಆದಾಯ ಜಾತ್ರೋತ್ಸವದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ.

ವಿಶೇಷ ದರ್ಶನದ ಟಿಕೆಟ್, ಲಾಡು, ದೇವಿ ಸೀರೆ ಮಾರಾಟ, ಹುಂಡಿ ಹಣ, ಜಾಹೀರಾತು, ತುಲಾಭಾರಸೇವೆಗಳಿಂದ ಒಟ್ಟು 12.63 ಕೋಟಿ ರೂ. ಆದಾಯ ಬಂದಿದೆ.

300 ರೂ. ವಿಶೇಷ ದರ್ಶನದ ಟಿಕೆಟ್‌ಗಳನ್ನು ಪಡೆದು ದೇವಿ ದರ್ಶನ ಮಾಡಿದ್ದು ಅದರಿಂದ 1,74,99,300 ರೂ. ಆದಾಯ ಬಂದಿದೆ.

71575 ಜನರು 1000ರೂ. ವಿಶೇಷ ದರ್ಶನದ ಟಿಕೆಟ್ ಖರೀದಿಸಿದ್ದು ಅದರಿಂದ 7,15,75,000 ಆದಾಯ ಸಂಗ್ರಹವಾಗಿದೆ. 127548 ಲಾಡುಗಳು ಮಾರಾಟವಾಗಿದ್ದು, 76,52,880 ರೂ. ಆದಾಯ ಬಂದಿದೆ. ವಿಶೇಷ ದರ್ಶನ ಹಾಗೂ ಲಾಡು ಮಾರಾಟದಿಂದ ಒಟ್ಟು ಮಹೋತ್ಸವದಲ್ಲಿ 9,67,27,180 ರೂ.‌ದಾಖಲೆಯ ಆದಾಯ ಸಂಗ್ರಹವಾಗಿದೆ.

127548 ಲಾಡುಗಳು ಮಾರಾಟವಾಗಿದ್ದು, 76,52,880 ರೂ. ಆದಾಯ ಬಂದಿದೆ. ಹುಂಡಿ ಕಾಣಿಕೆಯಿಂದ 2,55 97,567 ರೂ., ಜಾಹೀರಾತಿನಿಂದ 5,50,000 ರೂ., ಸೀರೆ ಮಾರಾಟದಿಂದ 2,00,305, ದೇಣಿಗೆಗಳಿಂದ 40,908, ತುಲಾಭಾರದಿಂದ 21ಲಕ್ಷ, ಇ ಹುಂಡಿಯಿಂದ 3,98,859 ರೂ., ಕಾಣಿಕೆ ರೂಪದಲ್ಲಿ 51 ಗ್ರಾಂ ಚಿನ್ನ, 913 ಗ್ರಾಂ‌ ಬೆಳ್ಳಿ, 500 ಗ್ರಾಂ ತಾಮ್ರ ಸಂಗ್ರಹವಾಗಿದೆ.

ಎಲ್ಲ ಮೂಲಗಳಿಂದ ಒಟ್ಟು 12,63,83,808 ರೂ. ಹಣ ಸಂಗ್ರಹವಾಗಿದ್ದು, ಹಾಸನಾಂಬ ಜಾತ್ರೆ ಇತಿಹಾಸದಲ್ಲಿ ಇಷ್ಟು ಪ್ರಮಾಣದ ಆದಾಯ ಸಂಗ್ರಹವಾಗಿರುವುದು ಇದೇ ಮೊದಲು.