ಹಾಸನ: ನಗರದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ನಡೆದ ವಿಭಾಗೀಯಟ್ಟದ ದಸರಾ ಕ್ರೀಡಾಕೂಟದ ಖೋಖೋ ಪಂದ್ಯಾವಳಿಯಲ್ಲಿ ಹಾಸನಾಂಬ ಖೋಖೋ ತಂಡ ಪ್ರಥಮ ಸ್ಥಾನ ಪಡೆದಿದೆ. ಮಂಗಳೂರಿನ ಆಳ್ವಾಸ್ ತಂಡದ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಮೂರು ಅಂಕಗಳಿಂದ ಭರ್ಜರಿ ಜಯ ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಬಲ ತಂಡವಾಗಿರುವ ಆಳ್ವಾಸ್ ತಂಡವನ್ನು ಸರಿಗಟ್ಟಲು ಹಾಸನಾಂಬ ತಂಡ ಪ್ರಬಲ ಹೋರಾಟವನ್ನೇ ನಡೆಸಿತು.
ವೃತ್ತಿಪರ ಹೋರಾಟ ನಡೆಸಿದ ಜಿಲ್ಲೆಯ ತಂಡದ ಶ್ರಮಕ್ಕೆ ಸಾಕ್ಷಿಯಾಗಿ ಪ್ರಶಸ್ತಿ ವಿತರಣೆ ವೇಳೆ ತಂಡದ ಹಲವು ಆಟಗಾರರ ಮಂಡಿಯ ಚರ್ಮ ಕಿತ್ತು ಬಂದು ರಕ್ತಸೋರುತ್ತಿದ್ದಿದ್ದು ಸಾಕ್ಷಿಯಾಗಿತ್ತು. ತಂಡ ಮುಂದೆ ದಸರಾ ಟ್ರೋಫಿಗಾಗಿ ಸೆಣೆಸಲಿದೆ