ಯುವಕನಿಂದ ಅಪ್ರಾಪ್ತ ಬಾಲಕಿ ಅಪಹರಣ: ಪ್ರಕರಣ ದಾಖಲು

ಅರಸೀಕೆರೆ: ತಾಲೂಕಿನ ಗಂಡಸಿ ಹೋಬಳಿಯ ಸರ್ಕಾರಿ ಪ್ರೌಢಶಾಲೆಯೊಂದರ ವಿದ್ಯಾರ್ಥಿನಿ, ಅಪ್ರಾಪ್ತ ಬಾಲಕಿಯನ್ನು ಯುವಕನೊಬ್ಬ ಅಪಹರಿಸಿರುವ ಸಂಬಂಧ ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಿಥುನ್ (28) ಅಪಹರಣ ಪ್ರಕರಣದ ಆರೋಪಿ. ಆಗಸ್ಟ್ 1ರ ಸಂಜೆ 7:30 ರ ಸಮಯದಲ್ಲಿ ಅಪ್ರಾಪ್ತಳ ತಾಯಿ ಹಾಲು ಹಾಕಲು ಡೇರಿಗೆ ಕುಡುಕುಂದಿ ಗ್ರಾಮದ ಅಯ್ಯಪ್ಪ ಎಂಬವರ ಮಗ ಮಿಥುನ್ ಮನೆಗೆ ಬಂದು ತಮ್ಮ ಮಗಳನ್ನು ಅಪರಿಸಿಕೊಂಡು ಹೋಗಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.

ಘಟನೆ ನಡೆದು ನಾಲ್ಕು ದಿನಗಳು ಕಳೆದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರಲಿಲ್ಲ ಎನ್ನಲಾಗಿದ್ದು, ಪಾಲಕರು ಪೊಲೀಸರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ನಂತರ ದೂರು ದಾಖಲಾಗಿದೆ.