ಕಾರಿನಲ್ಲಿ ಸಾಗಿಸುತ್ತಿದ್ದ ನಾಲ್ಕು ಲಕ್ಷ ರೂ. ವಶಪಡಿಸಿಕೊಂಡ ಚುನಾವಣಾ ಸಿಬ್ಬಂದಿ

ಹಾಸನ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಾಲ್ಕು ಲಕ್ಷ ರೂ. ನಗದನ್ನು ನಗರ ಹೊರವಲಯದ ಬೂವನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ವಶಕ್ಕೆ ಪಡೆಯಲಾಗಿದೆ.

ಪ್ರದೀಪ್ ಎಂಬುವವರಿಗೆ ಸೇರಿದ KA-13 Z 4463 ನಂಬರ್‌ನ ಎರ್ಟಿಗಾ ಕಾರಿನ್ನು ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿ ತಪಾಸಣೆ ನಡೆಸಿದಾಗ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ಪತ್ತೆಯಾಯಿತು.

ನಾಲ್ಕು ಲಕ್ಷ ರೂ. ನಗದು ವಶಪಡಿಸಿಕೊಂಡ ಸಿಬ್ಬಂದಿ ಕಾರಿನ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.