ಭವಾನಿ ರೇವಣ್ಣ ಆರೋಗ್ಯವೇ ಸರಿ ಇಲ್ಲ, ಅವರ ಬಗ್ಗೆ ಅನಗತ್ಯ ಚರ್ಚೆ ಮಾಡಬೇಡಿ ಎಂದ ದೇವೇಗೌಡರು

ಹಾಸನ: ಭವಾನಿ ರೇವಣ್ಣ ಅವರ ಆರೋಗ್ಯವೇ ಸರಿ ಇಲ್ಲ, ಅವರ ಬಗ್ಗೆ ಅನಾವಶ್ಯಕ ಚರ್ಚೆ ಮಾಡಬೇಡಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.‌

ಸಾಲಿಗ್ರಾಮ ಬಳಿಯ ರಾಂಪುರದಲ್ಲಿ ಭಾನುವಾರ ಭವಾನಿ ರೇವಣ್ಣ ಅವರ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರನೊಂದಿಗೆ ಅವರು ವರ್ತಿಸಿದ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿರುವಾಗಲೇ ಗೌಡರು ಸೊಸೆ ಪರ ಬ್ಯಾಟ್ ಬೀಸಿದ್ದಾರೆ.

ಭವಾನಿ ಅವರ ಎರಡೂ ಮಂಡಿಗಳ ಶಸ್ತ್ರಚಿಕಿತ್ಸೆ ಆಗಿದೆ. ಅವರ ಬಗ್ಗೆ ಅನಗತ್ಯ ಚರ್ಚೆ ಮಾಡಬಾರದು ಎಂದರು.