ಹಾಸನ: ನನ್ನ ಕೊನೆಗಾಲದಲ್ಲಿ ಅಪಪ್ರಚಾರಕ್ಕೆ ಮಣಿಯದೇ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಕೈಮುಗಿದು ಮನವಿ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಜೆಡಿಎಸ್ ಎಸ್ಸಿ/ಎಸ್ಟಿ ಘಟಕದ ಕಾರ್ಯಕರ್ತರನ್ನು ಕೋರಿದರು.
ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜೆಡಿಎಸ್ ಎಸ್ಸಿ/ಎಸ್ಟಿ ಘಟಕದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ನನಗೆ 91 ವರ್ಷ ಆಯ್ತು, ಇನ್ನೂ ಎಷ್ಟು ವರ್ಷ ಅಧಿಕಾರ ಮಾಡಬೇಕು? ಆವತ್ತು ಕೂಡ ಜಿಲ್ಲೆಯ ಮುಖಂಡರನ್ನು ಕೂರಿಸಿ ನನ್ನ ಆರೋಗ್ಯ ಕೆಡ್ತಿದೆ ನೀವು ಹೇಳದವರಿಗೆ ಲೋಕಸಭೆ ಟಿಕೆಟ್ ಕೊಡ್ತಿನಿ ಎಂದು ಹೇಳಿದೆ.
ಎಲ್ಲರನ್ನೂ ಕೂರಿಸಿ ಕೇಳಿದೆ, ಆಗ ಎಲ್ಲರೂ ಇದ್ದರು. ಅವರೆಲ್ಲ ನಾವ್ಯಾರು ನಿಲ್ಲಲ್ಲ ಎಂದು ಹೇಳಿದರು. ಹೀಗಾಗಿ ಕೊನೆಗೆ ಪ್ರಜ್ವಲ್‌ರೇವಣ್ಣ ಅವರಿಗೆ ಟಿಕೆಟ್ ಕೊಡುವ ತೀರ್ಮಾನ ಆಯ್ತು. ನಮ್ಮಲ್ಲಿ ಯಾವುದೇ ಮುಚ್ಚುಮರೆ ಇಲ್ಲ ಎಂದರು.