ದೇವೇಗೌಡರಿಗೆ 91 ವರ್ಷ, ಬುದ್ಧಿ ಭ್ರಮಣೆಯಿಂದ ಹೇಳ್ತಾನೆ ಅಂತಾರೆ. ನಾನು ಬದುಕಿರುತ್ತೇನೆ ಆದರೆ ಈ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ

ಕುಮಾರಸ್ವಾಮಿ ಬೇಷರತ್ ಕ್ಷಮೆ ಕೇಳಿದ್ದಾರೆ| ಒಬ್ಬ ಮನುಷ್ಯ ಕ್ಷಮೆ ಕೇಳುವುದಕ್ಕಿಂತ ಇನ್ನೇನು ಮಾಡಬೇಕು?

ಹಾಸನ : ಲೋಕಸಭೆ ಚುನಾವಣೆ ಮುಗಿದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ‌ ಭವಿಷ್ಯ ನುಡಿದರು.

ಬೇಲೂರು ತಾಲ್ಲೂಕಿನ ಇಬ್ಬೀಡಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಈ ದೇವೇಗೌಡರಿಗೆ 91 ವರ್ಷ, ಬುದ್ದಿ ಭ್ರಮಣೆಯಿಂದ ಹೇಳ್ತಾನೆ ಅಂತಾರೆ. ನಾನು ಬದುಕಿದ್ದೇನೆ, ಬದುಕಿರುತ್ತೇನೆ.‌ಆದರೆ ಈ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ ಎಂದರು.

ಎಚ್.ಡಿ. ಕುಮಾರಸ್ವಾಮಿ ಮಹಿಳೆಯರ ಬಗ್ಗೆ ನೀಡಿದ ಹೇಳಿಕೆಯನ್ನು ತಿರುಚಿ ಬರೆದಿದ್ದಾರೆ. ಅವರು ಯಾವ ಅರ್ಥದಲ್ಲಿ ಹೇಳಾದ್ದಾರೋ ಅದನ್ನು ಬಿಟ್ಟು ಬೇರೆಯ ಅರ್ಥ ನೀಡಿದರು.ಆದರೂ ಕುಮಾರಸ್ವಾಮಿ ಬೇಷರತ್ ಕ್ಷಮೆ ಕೇಳಿದ್ದಾರೆ. ಒಬ್ಬ ಮನುಷ್ಯ ಕ್ಷಮೆ ಕೇಳುವುದಕ್ಕಿಂತ ಇನ್ನೇನು ಮಾಡಬೇಕು? ಎಂದು ಪುತ್ರನ ಪರ ಬ್ಯಾಟ್ ಬೀಸಿದರು.

ಪಾಪ ಡಿಸಿಎಂ ಎಲ್ಲಾ ಕಡೆ ಕುಮಾರಸ್ವಾಮಿ ವಿರುದ್ಧ ಧಿಕ್ಕಾರ ಕೂಗಿಸುತ್ತಿದ್ದಾರೆ. ಧಿಕ್ಕಾರ ಕೂಗಿಸಿ ಕೂಗಿಸಿ ಮುಳುಗುತ್ತಿರುವ ಕಾಂಗ್ರೆಸ್‌ಗೆ, ಅವರಿಗೆ ಶಕ್ತಿ ತುಂಬಿಕೊಳ್ಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಬಗ್ಗೆ ಎಲ್ಲಾ ಬಿಚ್ಚಿಡಬಲ್ಲೆ. ಆದರೆ ನಾನು ಆ ಕೆಳಮಟ್ಟಕ್ಕೆ ಈ ವಯಸ್ಸಿನಲ್ಲಿ ಇಳಿಯಲ್ಲ ಎಂದರು.

ನಿನ್ನೆ ತುಮಕೂರಿನಲ್ಲಿ ಕೊನೆಯ ಸಭೆ ಮಾಡಿದೆ. ಕೆಲವರು ಬಂದು ಗಲಾಟೆ ಮಾಡಿದರು. ಅವರನ್ನು ಒದ್ದು ಒಳಗೆ ಹಾಕಿದ್ದಾರೆ. ಅದರಲ್ಲಿ ಒಬ್ ಜೆಡಿಎಸ್ ಕಾರ್ಯಕರ್ತನ ರೀತಿಯೇ ಬಂದಿದ್ದ.ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.