ಹಾಸನ: ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ 4 ದಶಕಗಳ ರಾಜಕೀಯ ಜೀವನದ ಒಡನಾಡಿ ಇಂದು ನಿಧನರಾದ ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ ಅವರ ಅಂತಿಮ ದರ್ಶನ ಪಡೆದರು.
ಪಟೇಲ್ ಶಿವರಾಂ ಅವರ ನಿವಾಸಕ್ಕೆ ಆಗಮಿಸಿದ ಗೌಡರು, ಪಾರ್ಥಿವ ಶರೀರಕ್ಕೆ ನಮಿಸಿ ಗೌರವ ಸಲ್ಲಿಸಿದರು. ತಮ್ಮ ಶಿಷ್ಯನ ನಿಧನಕ್ಕೆ ಕಂಬನಿ ಮಿಡಿದರು.
ಶಾಸಕ ಸ್ವರೂಪ್ ಪ್ರಕಾಶ್, ಪುಷ್ಪಗಿರಿ ಮಹಾಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮುಂತಾದವರಿದ್ದರು.