ಹಾಸನ: ಮಾಜಿ ಶಾಸಕ ಪ್ರೀತಂಗೌಡರು ಪ್ರಬುದ್ಧ ರಾಜಕಾರಣಿ. ಅವರು ಉತ್ತಮವಾದ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪ್ರೀತಂ
ಅವರು ಕೂಡ ಶಾಸಕರಾಗಿ ಹೋರಾಟದಲ್ಲಿ ಬಂದವರು.
ಅವರ ಸ್ಥಳೀಯ ರಾಜಕಾರಣದಲ್ಲಿ ಅಳಿವು, ಉಳಿವಿನ ಪ್ರಶ್ನೆ ಇರುತ್ತದೆ. ಅವರು ಉತ್ತಮವಾದ ನಿರ್ಧಾರ ತೆಗೆದುಕೊಳ್ತಾರೆ ಎಂಬುದು ನಮ್ಮ ನಿರೀಕ್ಷೆ .ಅದರ ಲಾಭ ಕಾಂಗ್ರೆಸ್‌ಗೆ ಆಗುತ್ತಾ ಎಂಬುದನ್ನು ಕಾದು ನೋಡಬೇಕು ಎಂದರು.
ರಾಜಕಾರಣದಲ್ಲಿ ಕುಟುಂಬಸ್ಥರ ಹಸ್ತಕ್ಷೇಪ ಮಾಮೂಲಿ ಆಗಿಬಿಟ್ಟಿದೆ. ಎಲ್ಲಾ ಪಾರ್ಟಿಯಲ್ಲೂ ಸಂಬಂಧಿಕರಿಗೆ ಟಿಕೆಟ್ ಕೊಟ್ಟಿದ್ದಾರೆ, ಕಾಂಗ್ರೆಸ್‌ನಲ್ಲಿ ಕೊಟ್ಟಿದ್ದಕ್ಕೆ ಏಕೆ ಆಕ್ಷೇಪಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದರು.
ನಾವೇನು ಬಿಜೆಪಿಯವರನ್ನು ಆಕ್ಷೇಪಣೆ ಮಾಡ್ತೀವಾ? ಯಡಿಯೂರಪ್ಪ ಅವರು ಬಿಜೆಪಿಯ ರಾಷ್ಟ್ರಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವ ಕಮಿಟಿಯಲ್ಲಿ ಇದ್ದಾರೆ. ಅವರ ಮಗ ಇಲ್ಲಿ ರಾಜ್ಯಾಧ್ಯಕ್ಷರು, ಅದನ್ನು ಹೆಚ್ಚು ಮಹತ್ವ ಕೊಟ್ಟು ಟೀಕೆ ಮಾಡಲು ಹೋಗಲ್ಲ.
ಜನರು ಯಾರ ಪರ ಇದ್ದಾರೆ ಎನ್ನುವುದನ್ನು ತಿಳಿದುಕೊಂಡು ಟಿಕೆಟ್ ಕೊಟ್ಟಿದ್ದಾರೆ. ಅದನ್ನು ಟೀಕೆ ಮಾಡುವುದನ್ನು ಸರಿಯಲ್ಲ ಎಂದರು.