ಎಚ್.ಡಿ.ರೇವಣ್ಣ ಕುಟುಂಬವನ್ನು ಕೊಲೆಗಡುಕರ ಕುಟುಂಬ ಎಂದು ಜರಿದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ

ಹಾಸನ : ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್‌ರೇವಣ್ಣ ವಿರುದ್ಧ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ವಾಗ್ದಾಳಿ ತೀವ್ರ ವಾಗ್ದಾಳಿ ನಡೆಸಿದರು.

ಮಾಧ್ಯಮಗೋಷ್ಠಿಗೆ ತುಂಬಾ ನೋವಿನಿಂದ ಬಂದಿದ್ದೇನೆ.ಈ ವರ್ಷ ನಾವು ಸಾಮಾಜಿಕವಾಗಿ, ಆರ್ಥಿಕವಾಗಿ ಸ್ವಲ್ಪ ಹಿಂದೆ ಹೋಗಿದ್ದೇವೆ. ಹಲವಾರು ಮಹನೀಯರಿಗೆ ಈ ಜಿಲ್ಲೆಯ ಮಣ್ಣು ಜನ್ಮ ನೀಡಿದ ಮಣ್ಣು ಇದು. ಈಗಲಾದರೂ ಜನ ಕಣ್ಣು ತೆರೆಯದಿದ್ದರೆ ಈ ಜಿಲ್ಲೆಯ ಮಣ್ಣಿಗೆ, ವರ್ಚಸ್ಸಿಗೆ ಧಕ್ಕೆ ಬರುತ್ತದೆ ಎಂದರು.

ಈ ಹಿಂದೆ ಹಾಸನ ಜಿಲ್ಲೆಯಲ್ಲಿ ಹೆಣ್ಣು, ಹೊನ್ನು, ಮಣ್ಣಿಗಾಗಿ ಕೊಲೆಗಳಾಗಿವೆ. ಈಗಲೂ ಈ ಜಿಲ್ಲೆಯಲ್ಲಿ ಹೆಣ್ಣು, ಹೊನ್ನು, ಮಣ್ಣಿಗಾಗಿ ಕೊಲೆಗಳು ನಡೆಯುತ್ತಿವೆ.

ಕಾರ್ತಿಕ್ ಅವರು ಭೂಮಿಯ ಬಗ್ಗಿ ಹೇಳಿಕೊಂಡಿದ್ದಾರೆ, ದೂರು ನೀಡಿದ್ದಾರೆ. ಅವರ ಪತ್ನಿ ಶಿಲ್ಪಾ ಹಲ್ಲೆಯಿಂದ ಗರ್ಭಫಾತ ಆಯ್ತು ಅಂತ ಹೇಳಿಕೊಂಡಿದ್ದಾರೆ. ಅವರು ಮೌನವಾಗಿ ಇರುವವರಲ್ಲ, ಬಾಯಿ ಮುಚ್ಚಿಕೊಂಡು ಇರುವವರಲ್ಲ, ಅದು ಅಸತ್ಯ ಆಗಿದ್ದರೆ ಬಾಯಿ ಬಿಡಬೇಕಿತ್ತು. 2022 ಆಗಸ್ಟ್‌ನಲ್ಲಿ ಜಮೀನಿನ್ನು ಖರೀದಿ ಮಾಡಿದ್ದೆ,ಅದೇ 2023 ರಲ್ಲಿ ಬಲವಂತ ಮಾಡಿ, ಹೆದರಿಸಿ, ಬೆದರಿಸಿ, ಕೊಲೆ ಮಾಡ್ತಿನಿ ಅಂತ ಹೇಳಿ ಬರೆಸಿಕೊಂಡಿದ್ದಾರೆ ಎಂದು ಕಾರ್ತಿಕ್ ಹೇಳಿದ್ದಾರೆ.

ಬಂಡವಾಳಶಾಹಿಗಳು, ಲೂಟಿಕೋರರು, ಅಧಿಕಾರಿಗಳು ಬೇನಾಮಿ ಹೆಸರಿನಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಅವೆಲ್ಲನ್ನೂ ವಶಪಡಿಸಿಕೊಂಡರೆ ಕೋಟ್ಯಾಂತರ ರೂ. ಮೌಲ್ಯದ ಭೂಮಿ ಉಳಿಯುತ್ತದೆ.

ಇದು ಕೂಡ ಬೇನಾಮಿ ವ್ಯವಹಾರನೇ, ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕರ್ತವ್ಯ ರಕ್ಷಕರೇ ಭಕ್ಷಕರೇರಾದರೆ, ಕೊಲೆ ಮಾಡುವವರ ಜೊತೆ ಸೇರಿಕೊಂಡರೆ?ಕಾರ್ಯಾಂಗ ಈ ದುಸ್ಥಿಗೆ ಬಂದುಬಿಟ್ಟರೆ ಹೇಗೆ? ಎಂದು ಕಿಡಿಕಾರಿದರು.

ಎಚ್.ಡಿ.ರೇವಣ್ಣ ಅವರ ಕುಟುಂಬವನ್ನು ಕೊಲೆಗಡುಕರ ಕುಟುಂಬ ಎಂದು ಜರಿದ ಮಾಜಿಶಾಸಕ ಎ.ಟಿ.ರಾಮಸ್ವಾಮಿ, ಎಲ್ಲಾ ಕಡೆ ಸಿಸಿಟಿವಿ ಕೆಟ್ಟು ಹೋಗಿದೆ ಅಂತಾರೆ. ಐಬಿ, ಸಬ್‌ರಿಜಿಸ್ಟರ್ ಕಚೇರಿಯಲ್ಲೂ ಸಿಸಿಟಿವಿ ಇಲ್ಲಾ ಅಂತಾರೆಅಧಿಕಾರಿಗಳು, ಇದು ಪ್ರಭಾವಿಗಳು ಸಾಕ್ಷ್ಯಗಳ ನಾಶ ಮಾಡಲು ಮಾಡಿರುವ ಹುನ್ನಾರ ಎಂದು ಆರೋಪಿಸಿದರು.

ಲೂಟಿ, ಅಕ್ರಮಕ್ಕೆ, ಮೋಸಕ್ಕೆ ಎಲ್ಲರೂ ಕೈ ಜೋಡಿಸುತ್ತಾರೆಪ್ರ. ಭಾಕರ್ ರೆಡ್ಡಿ, ಕಿರಣ್ ರೆಡ್ಡಿ,ರೇವಣ್ಣ ಅವರಿಗೂ  ಸಂಬಂಧವಿದೆ.

ಈ ಬೇನಾಮಿ ವಹಿವಾಟು ಹೊರಗೆ ಬರಬೇಕು ಎಂದು ಆಗ್ರಹಿಸಿದ ಅವರು, ಜಿಲ್ಲಾಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ. ಬಡವರಿಗೊಂದು, ಬಲಾಢ್ಯರಿಗೆ ಒಂದು ನ್ಯಾಯನಾ? ನೀವು ಬಲಾಢ್ಯರಿಗೆ ರಕ್ಷಣೆ ಕೊಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.

ಇವರು ರೈತರ ಪರ ಅಂತಾರೆ. ಇವರು ಬೇನಾಮಿ ರೈತರು, ಸುಡುವ ರೈತರು, ಒಳಗೊಂದು ಹೊರಗೊಂಡು ನಾಟಕ ಆಡ್ತಾರೆ. ಬೇನಾಮಿ ಆಸ್ತಿ ಮಾಡುವವರು ಇವರು ರೈತರ ಪರನಾ?

ಜಿಲ್ಲೆಯನ್ನು ರಿಪಬ್ಲಿಕ್ ಆಫ್ ಹಾಸನ ಮಾಡಲು ಹೊರಟಿದ್ದೀರಾ? ಚಕ್ರ ತಿರುಗುತ್ತಿದೆ, ಜಿಲ್ಲೆಯ ಜನ ಇಷ್ಟು ದಿನ ಮೋಸ ಹೋಗಿದ್ದಾರೆ.ಗುಲಾಮಿಗಿರಿಯಿಂದ‌ ಜನರು ಹೊರಗೆ ಬರಲೇಬೇಕು.ಈ ಬಾರಿ ಕಿತ್ತು ಎಸೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ಅವರನ್ನು ಉತ್ಸವ ಮೂರ್ತಿ ಮಾಡಿಕೊಂಡಿದ್ದಾರೆ. ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗ್ತಿನಿ ಅಂದಿದ್ದರು. ಇವತ್ತು ಅವರೇ ಪ್ರಧಾನಮಂತ್ರಿಯಾಗಬೇಕು ಅಂತ ಅವರ ಮನೆಯ ಹತ್ತಿರ ಹೋಗಿದ್ದಾರೆ.ಬಎಲ್ಲಿ ಹೋಯ್ತು ನಿಮ್ಮ ಸಿದ್ದಾಂತ?ಕುಟುಂಬದ ಹಿತಾಸಕ್ತಿಗಾಗಿ ಸಿದ್ದಾಂತಕ್ಕೆ ಎಳ್ಳು ನೀರು ಬಿಡಿಸಿದ್ರು ಎಂದು ಕುಟುಕಿದರು.

ನನ್ನದು ತಾಯಿ ಹೃದಯ ಎಂದು ಒಬ್ಬರು ಸಿಎಂ ಹೇಳಿದ್ದರು. ಬೇರೆ ಅವರ ಮನೆಯದಾದರೆ ಧಾವಿಸಿ ಬಿಡುತ್ತಿದ್ದೀರಿ.ನಿಮ್ಮ ಮನೆಯವದ್ದಾರೆ ಏಕೆ ಸುಮ್ಮನಿದ್ದೀರಿ? ಸತ್ಯ, ನ್ಯಾಯ, ಧರ್ಮವನ್ನು ಸಾಯಿಸಬೇಡಿ. ಕಾಂಜಿಪಿಂಜಿ ತನಿಖೆ ಮಾಡಬೇಡಿ, ಉನ್ನತಮಟ್ಟದ ತನಿಖೆ ಮಾಡಿವಮಹಿಳಾ ಆಯೋಗ, ಮಹಿಳಾ ಸಂಘಟನೆಗಳು, ಇತರೇ ಸಂಘಟನೆಗಳನ್ನು ಮನವಿ ಮಾಡುತ್ತೇನೆ ಎಂದರು.

ಮುಂದಿನ ದಿನಗಳಲ್ಲಿ ಹೋರಾಟ ಮಾಡೋಣ. ಕೈಮುಗಿದು ಬೇಡಿಕೊಳ್ಳುತ್ತೇನೆ ಎಲ್ಲರೂ ಜಾಗೃತರಾಗಿ, ಮುಂದಿನ ಹೋರಾಟಕ್ಕೆ ಬನ್ನಿ ಎಂದು ಕರೆ ನೀಡಿದರು.