ಆಪರೇಷನ್ ಜೆಡಿಎಸ್ ಆರಂಭಿಸಿದ ರೇವಣ್ಣ; ಹೆರಗು ವಾಸುದೇವ್ ಸೇರಿ ಹಲವು‌ ಕೈ ಮುಖಂಡರು ಜೆಡಿಎಸ್ ಸೇರ್ಪಡೆ

ಹಾಸನ: ತಮ್ಮ ಪುತ್ರನ‌ ಗೆಲುವಿಗಾಗಿ ಪ್ರಬಲ ಕಾರ್ಯತಂತ್ರ‌ ಹೆಣೆಯುತ್ತಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ, ಜಿಲ್ಲಾ ಕಾಂಗ್ರೆಸ್ ನ ಪ್ರಭಾವಿ ಮುಖಂಡರನ್ನು ಜೆಡಿಎಸ್ ಗೆ ಸೆಳೆಯುವ‌ ಮೂಲಕ‌ ಎದುರಾಳಿಗೆ ಶಾಕ್ ನೀಡಿದ್ದಾರೆ.

ಮಾಜಿ ಜಿ.ಪಂ. ಅಧ್ಯಕ್ಷ ಬಿ.ಆರ್.ವಾಸುದೇವ್, ತಾ.ಪಂ. ಮಾಜಿ ಸದಸ್ಯ ದೊರೆಸ್ವಾಮಿ, ಕಾಂಗ್ರೆಸ್ ಮುಖಂಡರಾದ ಚಿಕ್ಕ ಕಡಲೂರು ಬೋರೇಗೌಡ, ದಿವಾಕರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದುದ್ದ ಶಿವಣ್ಣ, ರಮೇಶ್ ಸೇರಿದಂತೆ ಇನ್ನಿತರೆ ಪ್ರಭಾವಿ ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಜೆಡಿಎಸ್ ಸೇರ್ಪಡೆಗೊಂಡ ಕಾಂಗ್ರೆಸ್ ಮುಖಂಡರನ್ನು ಮಾಲಾರ್ಪಣೆ ಮೂಲಕ ರೇವಣ್ಣ ಪಕ್ಷಕ್ಕೆ ಬರಮಾಡಿಕೊಂಡರು.

ಈ ಮೂಲಕ ತಮ್ಮ ಪಕ್ಷಕ್ಕೆ ದುದ್ದ ಹೋಬಳಿ ಭಾಗದಲ್ಲಿ ಹಿನ್ನಡೆಯುಂಟು ಮಾಡಬಹುದಾಗಿದ್ದ ಪ್ರಬಲ ಮುಖಂಡರನ್ನು ಸೆಳೆದು ರೇವಣ್ಣ ಜೆಡಿಎಸ್ ಬಲ ವೃದ್ಧಿಸುವಂತೆ ಮಾಡಿದ್ದಾರೆ.