ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆಯಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ, ಪದ್ಮನಾಭ ನಗರದ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಆಗಮಿಸಿದಾಗ ಅವರನ್ನು ಸುತ್ತುವರಿದು ಬೆಂಬಲಿಗರು ಕಣ್ಣೀರು ಹಾಕಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೇವಣ್ಣ ಬೆಂಬಲಿಗರು, ನಮ್ಮ ಕಣ್ಣೀರು ಒರೆಸೋರು ನೀವು ಅಣ್ಣ, ನೀವು ಕಣ್ಣೀರು ಹಾಕಬೇಡಿ ಎನ್ನುತ್ತಲೇ ತಾವೇ ಅಳುತ್ತಿದ್ದ ದೃಶ್ಯ ಕಂಡು ಬಂದವು.
ಅಭಿಮಾನಿಗಳ ಪ್ರೀತಿ ಕಂಡು ಭಾವುಕತೆಯಿಂದ ಗದ್ಗದಿತರಾದ ರೇವಣ್ಣ, ಆಯ್ತು ಆಯ್ತು ಎಂದಷ್ಟೇ ಪ್ರತಿಕ್ರಿಯಿಸಿದರು.