ಎಚ್.ಡಿ.ರೇವಣ್ಣ ಗೆ ಬಿಜೆಪಿಗರ ತಿರುಮಂತ್ರ; ಪ್ರಜ್ವಲ್ ಬದಲಿಸಲು‌ ಪ್ರೀತಂ ಟೀಂ ಪಟ್ಟು, ಜೆಡಿಎಸ್ ಗೆ ಇಕ್ಕಟ್ಟು

ಪ್ರತ್ಯೇಕ ಸಭೆ ನಡೆಸಿ ತಮ್ಮ ಅಭಿಪ್ರಾಯ ವರಿಷ್ಠರಿಗೆ ತಿಳಿಸಿರುವ ಪ್ರೀತಂ ಟೀಂ

ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೂಲಕ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಪ್ರಜ್ವಲ್ ರೇವಣ್ಣ ಅವರ ಹೆಸರು ಘೋಷಿಸುವ ಮೂಲಕ ಸ್ಥಳೀಯ ಬಿಜೆಪಿಗರಿಗೆ ಟಾಂಗ್ ನೀಡಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಅದೇ ಬಿಜೆಪಿ ಮುಖಂಡರು ಹಾಕುತ್ತಿರುವ ತಿರುಮಂತ್ರ ತಲೆನೋವಾಗಿ ಪರಿಣಮಿಸಿದೆ.

ಹಾಸನದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಕಣಕ್ಕಿಳಿಸಲು ಒಪ್ಪದ ಬಿಜೆಪಿ ನಾಯಕರು ತಮ್ಮ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿದ್ದಾರೆ. ಇದು ಅಧಿಕೃತವಾಗಿ ಅಭ್ಯರ್ಥಿ ಘೋಷಣೆಗೆ ಅಡ್ಡಿಯಾಗಿದ್ದು, ಜೆಡಿಎಸ್ ಮುಖಂಡರ ಎದೆಬಡಿತ ಹೆಚ್ಚಿಸಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂಗೌಡ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಶಾಸಕ ಸಿಮೆಂಟ್ ಮಂಜು, ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರರಿಂದ ಪ್ರಜ್ವಲ್ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿದೆ.

ಪ್ರತ್ಯೇಕ ಸಭೆ ನಡೆಸಿ ತಮ್ಮ ಅಭಿಪ್ರಾಯ ವರಿಷ್ಠ ರಿಗೆ ತಿಳಿಸಿರುವ ಈ ನಾಯಕರು ಪ್ರಜ್ವಲ್ ರೇವಣ್ಣ ಅಭ್ಯರ್ಥಿಯಾದರೆ ಗೆಲ್ಲುವ ಸಾಧ್ಯತೆ ಕಡಿಮೆ. ಜೆಡಿಎಸ್ ನಲ್ಲಿಯೇ ಆಂತರಿಕವಾಗಿಯೇ ಪ್ರಜ್ವಲ್‌ಗೆ ವಿರೋಧ ಇದೆ ಎಂದು ವರದಿ ನೀಡಿದ್ದಾರೆ.

ವಾರದ ಹಿಂದೆ ಹಾಸನದಲ್ಲಿ ಮಾಹಿತಿ ಸಂಗ್ರಹಿಸಲು ಬಂದ ಶಾಸಕ ಶ್ರೀವತ್ಸ ಹಾಗೂ ಲಕ್ಷ್ಮಿಅಶ್ವಿನಿ ಗೌಡ ನೇತೃತ್ವದ ಬಿಜೆಪಿ ರಾಜ್ಯ ತಂಡದ ಮುಂದೆಯೂ ಪ್ರಜ್ವಲ್ ಅಭ್ಯರ್ಥಿ ಆಗಲು ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಮುಖಂಡರ ಅಭಿಪ್ರಾಯ ಆಧರಿಸಿ ಅಭ್ಯರ್ಥಿ ಬದಲು ಮಾಡಲು ಬಿಜೆಪಿ ಹೈ ಕಮಾಂಡ್ ಸೂಚನೆ‌ ನೀಡಿದೆ ಎನ್ನಲಾಗಿದೆ. ಗೃಹಸಚಿವ ಅಮಿತ್ ಶಾ ಮೈಸೂರಿಗೆ ಬಂದಾಗಲೂ ಇದೇ ಅಭಿಪ್ರಾಯ ಹೇಳಿದ್ದ ಹಾಸನದ ಬಿಜೆಪಿ ನಾಯಕರು ತಮ್ಮ ನಿಲುವು ಬದಲಿಸಿಲ್ಲ.

ಈಗಾಗಲೇ ಪ್ರಜ್ವಲ್ ಹಾಸನದ ಲೋಕಸಭಾ ಅಭ್ಯರ್ಥಿ ಎಂದು ಘೋಷಣೆ ಮಾಡಿರುವ ಜೆಡಿಎಸ್, ತನ್ನ ಪಾಡಿಗೆ ತಾನು ಕಾರ್ಯಕರ್ತರ ಸಭೆ ಹೆಸರಿನಲ್ಲಿ ಪ್ರಚಾರ ಆರಂಭಿಸಿದೆ. ಆದರೆ ಈ ಕೆಲಸದಲ್ಲಿ ಎಲ್ಲಿಯೂ ಬಿಜೆಪಿ ಕೈಜೋಡಿಸದೆ ಅಂತ ಕಾಯ್ದುಕೊಂಡಿದೆ.

ಹಾಸನ ಕ್ಷೇತ್ರದ ಅಭ್ಯರ್ಥಿ ಬದಲಿಸುವಂತೆ ಅಮಿತ್ ಶಾ ಅವರು ಎಚ್.ಡಿ.ಕೆ.ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ದೊರಕಿದ‌ ಮೇಲೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಕಿಚನ್ ಕ್ಯಾಬಿನೆಟ್ ಒತ್ತಡಕ್ಕೆ ಸಿಲುಕಿದೆ