ಮತ ಎಣಿಕೆ ದಿನದ ಸಿದ್ಧತೆ ಆರಂಭಿಸಿ ಆ್ಯಕ್ಟೀವ್ ಆದ ಎಚ್.ಡಿ.ರೇವಣ್ಣ: ಏಜೆಂಟ್ ಐಡಿ ಕಾರ್ಡ್ ಗಳಿಗೂ ವಿಶೇಷ ಪೂಜೆ!

ಬೆಳಗ್ಗೆಯಿಂದ ದೇವಸ್ಥಾನ ಸುತ್ತಾಟ| ಪ್ರಮುಖರೊಂದಿಗೆ ಸಭೆ| ಮತ ಎಣಿಕೆ ಕೇಂದ್ರಕ್ಕೆ ತೆರಳುವ ಏಜೆಂಟರಿಗೆ ಸಲಹೆ-ಸೂಚನೆ

ಹಾಸನ: ಜೂ.4 ರಂದು ಲೋಕಸಭಾ ಚುನಾವಣೆ ಮತ‌ಎಣಿಕೆ ದಿನ ಸಮೀಪಿಸುತ್ತಿರುವಂತೆ ಫುಲ್ ಆ್ಯಕ್ಟೀವ್ ಆಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ದೇವಸ್ಥಾನಗಳನ್ನು ಸುತ್ತಿ ಮತೆಣಿಕೆ ಕೇಂದ್ರದ ಏಜೆಂಟರ ಗುರುತಿನ ಚೀಟಿಗಳಿಗೂ ಪೂಜೆ ಮಾಡಿಸಿದರು.

ವಿಡಿಯೋ ವೀಕ್ಷಣೆಗೆ ಈ ಲಿಂಕ್ ಬಳಸಿ:

https://www.instagram.com/reel/C7teZr9Bbwz/?igsh=aTEyNXlicGIyZmI0

ಇಂದು ಬೆಳಿಗ್ಗೆಯಿಂದ ಟೆಂಪಲ್ ರನ್‌ ‌ನಲ್ಲಿ ಬ್ಯುಸಿಯಾಗಿದ್ದ ಎಚ್.ಡಿ‌.ರೇವಣ್ಣ, ಹರದನಹಳ್ಳಿಯ ದೇವೇಶ್ವರ, ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ನಂತರ ಹರದನಹಳ್ಳಿ ಮನೆಯಲ್ಲಿ ಜೆಡಿಎಸ್ ಪ್ರಮುಖರ ಸಭೆ ನಡೆಸಿದ ಎಚ್.ಡಿ.ರೇವಣ್ಣ, ಮತ ಎಣಿಕೆ ಕೇಂದ್ರಕ್ಕೆ ತೆರಳುವ ಏಜೆಂಟರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು. ಸಂಭಾವ್ಯ ಫಲಿತಾಂಶ ನಂತರದ ಕ್ರಮ ಬಗ್ಗೆ ಚರ್ಚಿಸಿದರು.

ನಂತರ ಮಾವಿನಕೆರೆಯ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಮುಚ್ಚಿದ ಲಕೋಟೆಯಲ್ಲಿ ಏಜೆಂಟರ ಗುರುತಿನ ಚೀಟಿಗಳನ್ನು ಅರ್ಚಕರಿಗೆ ನೀಡಿ ಪೂಜೆ ಮಾಡಿಸಿದರು. ಹಾಸನ ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್ ಜತೆಯಲ್ಲಿದ್ದರು.