ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕುಟುಂಬವನ್ನು ಮುಗಿಸಲು ಹಲವರು ಹುನ್ನಾರ ಮಾಡಿದ್ದಾರೆ ಆದರೆ ಅವರ ಕುಟುಂಬ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ.
ನಗರದ ಡೇರಿ ವೃತ್ತದಲ್ಲಿ ಇರುವ ಹಾಮೂಲ್ ಆವರಣದಲ್ಲಿ ಇಂದು ಹಾಸನ ಹಾಲು ಒಕ್ಕೂಟದ ವಾರ್ಷಿಕ ಮಹ ಸಭೆ ಉದ್ದೇಶಿಸಿ ಮಾತನಾಡಿ, ಎಲ್ಲಾ ರೀತಿಯಲ್ಲೂ ದೇವೇಗೌಡ ಕುಟುಂಬಕ್ಕೆ ಕೆಲವರು ತೊಂದರೆ ನೀಡುತ್ತಿದ್ದಾರೆ.
ರೇವಣ್ಣ ಕುಟುಂಬ ಮುಗಿಸಿದರೆ ಅವರ ರಾಜಕೀಯ ಭವಿಷ್ಯ ಮುಗಿಯಿತು ಎಂಬ ಭಾವನೆ ಕೆಲವರಲ್ಲಿ ಇದೆ, ಆದರೆ ರೇವಣ್ಣ ಇರುವವರೆಗೂ ನಮ್ಮ ಕುಟುಂಬ ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.