ಹಾಮೂಲ್ ಅಧ್ಯಕ್ಷರಾಗಿ ಏಳನೇ ಬಾರಿಗೆ ಆಯ್ಕೆಯಾದ ಎಚ್.ಡಿ.ರೇವಣ್ಣ!

ಹದಿನಾಲ್ಕು ನಿರ್ದೇಶಕರ ಆಡಳಿತ ಮಂಡಳಿ ಸಭೆಯಲ್ಲಿ ಪುನರಾಯ್ಕೆಯಾದ ರೇವಣ್ಣ

ಹಾಸನ: ಹಾಸನ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಪುನರಾಯ್ಕೆಯಾಗಿದ್ದಾರೆ.

ಮಂಗಳವಾರ ಹಾಮೂಲ್ ನಲ್ಲಿ ಆಯೋಜಿಸಿದ್ದ ಆಡಳಿತ ಮಂಡಳಿ ಸಭೆಯಲ್ಲಿ ರೇವಣ್ಣ ಅವಿರೋಧವಾಗಿ ಏಳನೇ ಬಾರಿಗೆ ಆಯ್ಕೆಯಾದರು.

1994 ರಿಂದ ಸತತವಾಗಿ ಆಯ್ಕೆ ಆಗುತ್ತಿರುವ ಎಚ್.ಡಿ.ರೇವಣ್ಣ 2024 ರಿಂದ 2029 ರವರೆಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಹದಿನಾಲ್ಕು ಮಂದಿ ನಿರ್ದೇಶಕರ ಸ್ಥಾನಕ್ಕೆ ಈಚೆಗೆ ಚುನಾವಣೆ ನಡೆದಿತ್ತು. ಎಲ್ಲ ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಇಂದಿನ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಡಿ.ರೇವಣ್ಣ ಅವರ ಹೆಸರು ಸೂಚಿಸಿದಾಗ ಎಲ್ಲರೂ ಬೆಂಬಲ ವ್ಯಕ್ತಪಡಿಸಿ ಅವಿರೋಧವಾಗಿ ಆಯ್ಕೆ ಮಾಡಿದರು.

ರಾಜ್ಯದಲ್ಲಿ ಹಾಸನ‌ ಹಾಲು ಒಕ್ಕೂಟ ಎರಡನೇ ಸ್ಥಾನದಲ್ಲಿದ್ದು, ಶೀಘ್ರವೇ ಮೆಗಾ ಡೇರಿ ಕಾರ್ಯಾರಂಭ ಮಾಡಲಿದೆ.