ಎಚ್.ಡಿ.ರೇವಣ್ಣಗೆ ಸ್ಕೆಚ್?; ನಾನು ಸಿಗಲಿಲ್ಲ ಎಂದು ಕೃಷ್ಣೇಗೌಡನನ್ನು ಹತ್ಯೆ ಮಾಡಿದರು, ನನ್ನನ್ನು ಮುಗಿಸಲು ಏನೇನು ನಡೀತಿದೆ ಎನ್ನುವುದು ಗೊತ್ತಿದೆ

ದೇವೇಗೌಡರ ಕುಟುಂಬ ಮುಗಿಸಬೇಕು ಎಂಬ ದೊಡ್ಡ ಷಡ್ಯಂತ್ರ ನಡೆಯುತ್ತಿದೆ.

ಹಾಸನ: ಜೆಡಿಎಸ್ ಕಾರ್ಯಕರ್ತ ಕೃಷ್ಣೇಗೌಡ ಹತ್ಯೆಯ ದಿನ ನನ್ನನ್ನು ಟಾರ್ಗೆಟ್ ಮಾಡಲಾಗಿತ್ತು, ನಾನು ಸಿಗದ್ದರಿಂದ ಅವರನ್ನು ಕೊಲ್ಲಲಾಯಿತು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.

ನಗರದ ಸಂಸದರ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನ ಮುಗಿಸಲು ಕೂಡ ಏನೇನು ನಡೀತಿದೆ ಎಂಬುದು ನಂಗೆ ಗೊತ್ತಿದೆ.

ಪ್ರಕರಣದ ಆರೋಪಿಗಳು ಇನ್ನು ಅರೆಸ್ಟ್ ಆಗಿಲ್ಲ. ಇದಕ್ಕೆಲ್ಲ ಹಿಂದೆ ಯಾರು ಸಪೋರ್ಟ್ ಮಾಡ್ತಾ ಇದಾರೆ ನಂಗೆ ಗೊತ್ತು ಎಂದು ತಾವು ಪ್ರಾಣ ಬೆದರಿಕೆ ಎದುರಿಸುತ್ತಿರುವುದಾಗಿ ಹೇಳಿದರು.

ಒಟ್ಟಿನಲ್ಲಿ ದೇವೇಗೌಡರ ಕುಟುಂಬ ಮುಗಿಸಬೇಕು ಎಂಬ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಇದರ ಹಿಂದೆ ದೊಡ್ಡ ದೊಡ್ಡವರ ಕೈವಾಡ ಇದೆ. ಈ ಬ್ಲಾಕ್ ಮೇಲ್ ರಾಜಕಾರಣಕ್ಕೆ ನಾನು ಬಗ್ಗುವುದಿಲ್ಲ.

ದೇವೇಗೌಡ ಅವರ ಕುಟುಂಬವನ್ನು ಮುಗಿಸಲು ಹೋದರೆ ಒಂದಲ್ಲ ಒಂದು ದಿನ ಆ ಕುತಂತ್ರ ಅವರಿಗೆ ವಾಪಸ್ ಆಗುತ್ತೆ. ಇಂಥದ್ದೆಲ್ಲಾ ನಾನು ನೋಡಿದ್ದೀನಿ ಎಂದರು.