ವಿಜಯೇಂದ್ರ ಇನ್ನೂ ಜೂನಿಯರ್: ಲಿಂಬಾವಳಿ ಅಸಮಾಧಾನ

ಹಾಸನ : ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ವಿಚಾರದಲ್ಲಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ ಮಾಜಿಸಚಿವ ಅರವಿಂದ ಲಿಂಬಾವಳಿ, ಬಿಜೆಪಿಯಲ್ಲಿ ಅಸಮಾಧಾನ ಕೇಳುವವರಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಾಸನಾಂಬೆ ದೇವಿ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಜಯೇಂದ್ರ ನನಗೆ ದೂರವಾಣಿ ಕರೆ ಮಾಡಿದ್ರು ನಾನು ಅಭಿನಂದನೆ ಸಲ್ಲಿಸಿದ್ದೇನೆ.
ಸಾರ್ವಜನಿಕವಾಗಿ ಮಾಧ್ಯಮದ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ
ಅವರ ಕೆಲಸದಲ್ಲಿ ಯಶಸ್ವಿ ಆಗಲಿ ಎಂದು ಹಾರೈಸುತ್ತೇನೆ ಎಂದರು.

ಇದು ನಮ್ಮ ಪಕ್ಷದ ಆತಂಕರಿಕ ವಿಚಾರ
ಅಸಮಾಧಾನ ಇರಬಹುದು, ಇಲ್ಲ ಅಂತ ನಾನು ಹೇಳಲ್ಲ. ಸಹಜವಾಗಿ ಅಸಮಾಧಾನಗಳಿವೆ.

ಬೇರೆಯವರಿಗೆ ಹೋಲಿಸಿಕೊಂಡರೆ ಅವರು ಬಹಳ ಜ್ಯೂನಿಯರ್ ಅನ್ನುವಂತಹದ್ದು ಇದೆ. ಹಾಗೇ ಯಡಿಯೂರಪ್ಪ ಅವರ ಮಗ ಎಂಬ ಒಂದೇ ಕಾರಣಕ್ಕೆ ಕೊಟ್ಟಿದ್ದಾರೆ ಎಂಬು ಮಾತುಗಳು ಬರ್ತಿದೆ ಎಂದರು.

ನೇಮಕಗೊಂಡ ಸಂದರ್ಭದಲ್ಲಿ ಇಂತಹ ಮಾತುಗಳ ಸಹಜ, ಸಹಜ ಪ್ರಕ್ರಿಯೆಯಾಗಿ ಆಯ್ಕೆ ಆಗಿ ಬಂದಿದ್ದರೆ ಇಂತಹ ಚರ್ಚೆಗಳು ಬರ್ತಿರ್ಲಿಲ್ಲವೇನೋ, ನೇಮಕ ಆಗಿರುವುದರಿಂದ ಈ‌ ಎಲ್ಲಾ ಚರ್ಚೆಗಳು ಬಂದಿದೆ ಎಂದರು.
ಅಸಮಾಧಾನ ಸಂಬಂಧಪಟ್ಟವರಿಗೆ ತಲುಪಿದ್ರೆ ಗೊತ್ತಾಗುತ್ತೆ.ಇತ್ತೀಚಿಗೆ ನಮ್ಮ ಪಕ್ಷದಲ್ಲಿ ಈ ತರಹದ ಅಸಮಾಧಾನಗಳನ್ನು ಕೇಳೋರೇ ಇಲ್ಲಾ ಅನ್ನುವ ಮಟ್ಟಕ್ಕೆ ಆಗಿದೆ. ಅವರಿಗೆ ತಲುಪಿದ್ರೆ ಸರಿ ಮಾಡ್ತಾರೆ ಅನ್ನುವ ವಿಶ್ವಾಸ ನನಗಿದೆ ಎಂದರು.

ಕಾಂಗ್ರೆಸ್‌ನಷ್ಟು ಅಸಮಾಧಾನ ನಮ್ಮಲ್ಲಿ ಇಲ್ಲ ಸರಿ ಹೋಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.