ಪ್ರಜ್ವಲ್ ಎಲ್ಲೋ ಹೋಗಿರಬಹುದು, ವಿಚಾರಣೆಗೆ ಕರೆದಾಗ ಬರುತ್ತಾನೆ: ಎಚ್.ಡಿ.ರೇವಣ್ಣ ಫಸ್ಟ್ ರಿಯಾಕ್ಷನ್

ನಾನೆಲ್ಲೂ ಓಡಿ ಹೋಗಿಲ್ಲ. ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿ

ಬೆಂಗಳೂರು: ಹಾಸನ ಸಂಸದ ಹಾಗೂ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪುತ್ರನ ವಿರುದ್ಧದ ಈ ರೀತಿಯ ಆರೋಪ ಕುರಿತು ಮಾಜಿ ಸಚಿವ, ಶಾಸಕ ಹೆಚ್.ಡಿ ರೇವಣ್ಣ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್.ಡಿ ರೇವಣ್ಣ, ‘ನಾನೆಲ್ಲೂ ಓಡಿ ಹೋಗಿಲ್ಲ. ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿ. ನಾವು ಕಾನೂನು ರೀತಿ ಈ ಪ್ರಕರಣವನ್ನು ಎದುರಿಸುತ್ತೇವೆ ಎಂದರು.

ವಿಚಾರಣೆಗೆ ಕರೆದಾಗ ಪ್ರಜ್ವಲ್ ಬರುತ್ತಾನೆ: ಎಸ್ ಐಟಿ ತನಿಖೆ ಮಾಡುತ್ತಿರುವುದಿರಂದ ಏನು ಹೇಳಲ್ಲ. ತಮ್ಮ ಮಗ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ. ರೇವಣ್ಣ, ಆತ ಎಲ್ಲೋ ಹೋಗಿರಬಹುದು. ಆದರೆ ವಿಚಾರಣೆಗೆ ಕರೆದರೆ ಬರುತ್ತಾನೆ ಎಂದು ಮಾಜಿ ಸಚಿವರೂ ಆದ ರೇವಣ್ಣ ತಿಳಿಸಿದ್ದಾರೆ.